Advertisement

Punjab ಹೊಟೇಲ್ ಮಾಲೀಕನಿಂದ ಸೇನಾ ಮೇಜರ್, ಜವಾನರ ಮೇಲೆ ಮಾರಣಾಂತಿಕ ಹಲ್ಲೆ

03:07 PM Mar 14, 2024 | Team Udayavani |

ಪಂಜಾಬ್: ಸೋಮವಾರ ಪಂಜಾಬ್‌ನ ಮನಾಲಿ-ರೋಪರ್ ರಸ್ತೆಯಲ್ಲಿರುವ ಧಾಬಾವೊಂದರ ಮಾಲೀಕರು ಮತ್ತು ಕಾರ್ಮಿಕರಿಂದ ಸೇನಾ ಮೇಜರ್ ಮತ್ತು ಅವರ 16 ಸೈನಿಕರ ಮೇಲೆ ಹಲ್ಲೆ ನಡೆಸಿದ ಘಟನೆಯೊಂದು ಪಂಜಾಬ್ ನಲ್ಲಿ ನಡೆದಿರುವುದಾಗಿ ವರದಿಯಾಗಿದೆ

Advertisement

ಘಟನೆಗೆ ಸಂಬಂಧಿಸಿ ಹೋಟೆಲ್ ಮಾಲೀಕ ಸೇರಿ ಕೆಲ ಕಾರ್ಮಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ:
ಲಡಾಖ್ ಸ್ಕೌಟ್ಸ್‌ನ ಮೇಜರ್ ಸಚಿನ್ ಸಿಂಗ್ ಕುಂತಲ್ ಮತ್ತು ಅವರ ತಂಡದ ಸದಸ್ಯರು ಹಿಂದಿನ ದಿನ ಲಾಹೌಲ್‌ನಲ್ಲಿ ನಡೆದ ಸ್ನೋ ಮ್ಯಾರಥಾನ್‌ನಲ್ಲಿ ಭಾಗವಹಿಸಿ ಗೆದ್ದು ಹಿಂತಿರುಗುವ ವೇಳೆ ರಾತ್ರಿ 9.15 ರ ಸುಮಾರಿಗೆ ಊಟಕ್ಕೆ ರೋಪರ್ ಜಿಲ್ಲೆಯ ಭಾರತ್‌ಗಢ್ ಬಳಿಯ ಆಲ್ಪೈನ್ ಧಾಬಾದಲ್ಲಿ ನಿಲ್ಲಿಸಿದ್ದಾರೆ ಈ ವೇಳೆ ಆಹಾರ ಸೇವಿಸಿದ ತಂಡಕ್ಕೆ ಹೋಟೆಲ್ ಸಿಬಂದಿ ಬಿಲ್ ನೀಡಿದ್ದಾನೆ ಇನ್ನೇನು ಬಿಲ್ ಪಾವತಿಸಬೇಕು ಎನ್ನುವ ವೇಳೆ ಹೋಟೆಲ್ ಮಾಲೀಕ ಆನ್ ಲೈನ್ ಪಾವತಿ ಇಲ್ಲ ಬದಲಾಗಿ ನಗದು ನೀಡಬೇಕೆಂದು ಹೇಳಿದ್ದಾರೆ ಆದರೆ ಇವರು ಅದಾಗಲೇ ಆನ್ ಲೈನ್ ಪಾವತಿ ಮಾಡಿಯಾಗಿದೆ ಇದರಿಂದ ಕೋಪಗೊಂಡ ರೆಸ್ಟೋರೆಂಟ್ ಮಾಲೀಕ ಸೇನಾ ಮೇಜರ್ ಅವರಲ್ಲಿ ನಗದು ಪಾವತಿಗೆ ಪಟ್ಟು ಹಿಡಿದಿದ್ದಾನೆ ಈ ವೇಳೆ ಇಬರ ನಡುವೆ ವಾಗ್ವಾದ ನಡೆದಿದೆ ಒಮ್ಮೆ ಪಾವತಿ ಮಾಡಿದ ಬಳಿಕ ಇನ್ನೊಮ್ಮೆ ನಗದು ಪಾವತಿ ಮಾಡುವುದಿಲ್ಲ ಎಂದು ಹೇಳಿದ್ದಾರೆ ಇದರಿಂದ ಕೋಪಗೊಂಡ ಮಾಲೀಕ ಕರೆ ಮಾಡಿ ತನ್ನ ಜನರನ್ನು ಬರಹೇಳಿದ್ದಾನೆ ಕೂಡಲೇ ಅಲ್ಲಿಗೆ ಬಂದ ಯುವಕರ ಗುಂಪು ದೊಣ್ಣೆ, ಕಬ್ಬಿಣದ ಸಲಾಕೆ ಮೂಲಕ ತಂಡದ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಮೇಜರ್ ಅವರ ಕೈಗಳು ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು ಅವರು ಪ್ರಜ್ಞಾಹೀನರಾಗಿದ್ದರು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ರೋಪರ್ ಸಿವಿಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ.

Advertisement

ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೆಸ್ಟೋರೆಂಟ್ ಮಾಲೀಕ ಸೇರಿ ನಾಲ್ವರನ್ನು ಬಂಧಿಸಿದ್ದಾರೆ, ಉಳಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬಿಸಿದ್ದಾರೆ.

ಇದನ್ನೂ ಓದಿ: Bollywood: ಮಗಳ ವಯಸ್ಸಿನ ನಟಿ ಜೊತೆ ರೊಮ್ಯಾನ್ಸ್; ಅಕ್ಷಯ್‌ ಕುಮಾರ್ ಮೇಲೆ ನೆಟ್ಟಿಗರು ಗರಂ

Advertisement

Udayavani is now on Telegram. Click here to join our channel and stay updated with the latest news.

Next