Advertisement
ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ ಜತೆಗೆ ವನಿತಾ ತಂಡದ ಪೂನಮ್ ಯಾದವ್ ಅವರ ಹೆಸರನ್ನು ಬಿಸಿಸಿಐ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.
1961ರಿಂದ ಇಲ್ಲಿಯ ವರೆಗೆ ಭಾರತ ಸರಕಾರದಿಂದ 53 ಕ್ರಿಕೆಟಿಗರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಬ್ಬರು ಫುಟ್ಬಾಲಿಗರು
ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧು ಮತ್ತು ಸ್ಟ್ರೈಕರ್ ಜೇಜೆ ಲಾಲ್ಪೆಖುÉವ ಅವರ ಹೆಸರನ್ನು ಅಖೀಲ ಭಾರತ ಫುಟ್ಬಾಲ್ ಫೆಡರೇಶನ್ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.
ಎಐಎಫ್ಎಫ್ ಇವರಿಬ್ಬರ ಹೆಸರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತಿರುವುದು ಇದು ಎರಡನೇ ಸಲ. 2017ರಲ್ಲಿ ಗುರ್‌ಪ್ರೀತ್ ಮತ್ತು ಜೆಜೆ ಹೆಸರನ್ನು ವನಿತಾ ತಂಡದ ನಾಯಕಿ ಬೆಂಬೆಮ್ ದೇವಿ ಅವರೊಂದಿಗೆ ಶಿಫಾರಸು ಮಾಡಲಾಗಿತ್ತು. ಅಂದು ಬೆಂಬೆಮ್ ದೇವಿ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದರು.
ಸುನೀಲ್ ಚೆಟ್ರಿ ಅನಂತರ ಇವರಿಬ್ಬರು ರಾಷ್ಟ್ರೀಯ ತಂಡದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸುತ್ತಿರುವ ಆಟಗಾರರಾಗಿದ್ದಾರೆ.