Advertisement

Copa America: ಕೆನಡಾವನ್ನು ಕೆಡವಿ ಆರ್ಜೆಂಟೀನಾ ಫೈನಲ್‌ಗೆ

01:46 AM Jul 11, 2024 | Team Udayavani |

ಈಸ್ಟ್‌ ರುದರ್‌ಫೋರ್ಡ್‌ (ನ್ಯೂ ಜೆರ್ಸಿ): ಸ್ಟಾರ್‌ ಆಟಗಾರ ಲಿಯೋನೆಲ್‌ ಮೆಸ್ಸಿ ಅವರ 109ನೇ ಅಂತಾರಾಷ್ಟ್ರೀಯ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್‌ ಆರ್ಜೆಂಟೀನಾ “ಕೊಪಾ ಅಮೆರಿಕ ಕಪ್‌’ ಫ‌ುಟ್‌ಬಾಲ್‌ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಇರಿಸಿದೆ.

Advertisement

ಸೆಮಿಫೈನಲ್‌ನಲ್ಲಿ ಮೆಸ್ಸಿ ಪಡೆ ಕೆನಡಾವನ್ನು 2-0 ಗೋಲುಗಳಿಂದ ಕೆಡವಿತು.

ಇದರೊಂದಿಗೆ ಆರ್ಜೆಂಟೀನಾದ ಸತತ ಗೆಲುವಿನ ಸಂಖ್ಯೆ 10ಕ್ಕೆ ಏರಿತು. ಇನ್ನೊಂದು ಸೆಮಿಫೈನಲ್‌ ಉರುಗ್ವೆ ಮತ್ತು ಕೊಲಂಬಿಯಾ ನಡುವೆ ಏರ್ಪಡಲಿದ್ದು, ರವಿವಾರ ಪ್ರಶಸ್ತಿ ಸಮರ ನಡೆಯಲಿದೆ.

ಪಂದ್ಯದ 22ನೇ ನಿಮಿಷದಲ್ಲಿ ಜೂಲಿಯನ್‌ ಅಲ್ವರೇಝ್, 51ನೇ ನಿಮಿಷದಲ್ಲಿ ಲಿಯೋನೆಲ್‌ ಮೆಸ್ಸಿ ಗೋಲು ಸಿಡಿಸಿದರು. ಆರ್ಜೆಂಟೀನಾ ಪರ ಆಡಿದ ಕಳೆದ 25 ಪಂದ್ಯಗಳಲ್ಲಿ ಮೆಸ್ಸಿ 28 ಗೋಲು ಹೊಡೆದರೂ ಈ ಪಂದ್ಯಾವಳಿಯಲ್ಲಿ ಬಾರಿಸಿದ ಮೊದಲ ಗೋಲು ಇದಾಗಿದೆ. ಹಾಗೆಯೇ ಕೊಪಾ ಅಮೆರಿಕ ಟೂರ್ನಿಯಲ್ಲಿ ಹೊಡೆದ 14ನೇ ಗೋಲು. ದಾಖಲೆ ಸರಿದೂಗಿಸಲು ಇನ್ನು 3 ಗೋಲುಗಳ ಅಗತ್ಯವಿದೆ. ಇದು ಸ್ವಾತಂತ್ರ್ಯ ದಿನದಂದು ಒಲಿದ ಜಯವಾದ್ದರಿಂದ ಆರ್ಜೆಂಟೀನಾ ಭಾರೀ ಸಂಭ್ರಮಾಚರಣೆ ನಡೆಸಿತು.

Advertisement

Udayavani is now on Telegram. Click here to join our channel and stay updated with the latest news.

Next