Advertisement

America ಬಿಂಗ್‌ಹ್ಯಾಮ್‌ ಟನ್‌ ವಿ.ವಿ. ಸಹಯೋಗ: ಮೈಟ್‌ನಲ್ಲಿ”ಸ್ವಾಯತ್ತ ವಾಹನಗಳು’ ಕಾರ್ಯಾಗಾರ

12:27 AM Sep 04, 2024 | Team Udayavani |

ಮಂಗಳೂರು: ಮೂಡುಬಿದಿರೆ ಯಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಎಂಜಿನಿ ಯರಿಂಗ್‌ (ಮೈಟ್‌) ಬಿಂಗ್‌ಹ್ಯಾಮ್‌ ಟನ್‌ ವಿವಿ (ಬಿಯು), ನ್ಯೂಯಾರ್ಕ್‌ ಸ್ಟೇಟ್‌ ವಿವಿ, ಯುಎಸ್‌ಎ ಇದರ ಸಹಯೋಗದಲ್ಲಿ “ಮೊಬಿಲಿಟಿ ಭವಿಷ್ಯ: ಸ್ವಾಯತ್ತ ವಾಹನಗಳಲ್ಲಿ ಉದ ಯೋನ್ಮುಖ ತಂತ್ರಜ್ಞಾನಗಳು’ ಕುರಿತ ಅಲ್ಪಾವಧಿ  ಕೋರ್ಸ್‌ (ಎಸ್‌ಟಿಸಿ) ಅನ್ನು ಸೆ. 2ರಿಂದ 4ರವರೆಗೆ ಆಯೋಜಿಸಿದೆ.

Advertisement

ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ ಅಮೆರಿಕದ ಬಿಂಗ್‌ಹ್ಯಾಮ್‌ ಟನ್‌ ವಿ.ವಿ.ಯ ಉಪನ್ಯಾಸಕ ಡಾ| ಯೋಂಗ್‌ ವಾಂಗ್‌ ಉದ್ಘಾಟಿಸಿದರು. ಅಪಘಾತವನ್ನು ತಡೆಯಲು ಇರುವ ವ್ಯವಸ್ಥೆ, ಭಾರತ ದಲ್ಲಿನ ಅಪಘಾತ ಸವಾಲುಗಳು ಮತ್ತು ಸಂಶೋಧನ ಉದ್ದೇಶಗಳು, 3ಡಿ ಸಿಮ್ಯುಲೇಶನ್‌/ಡಿಜಿಟಲ್‌ ಟ್ವಿನ್ಸ್‌ ಅಪ್ಲಿಕೇಶನ್‌ಗಳು, 3ಡಿ ಸಿಮ್ಯುಲೇಶನ್‌ ಮಾದರಿಯೊಂದಿಗೆ ವಿಆರ್‌ ಮತ್ತು ವಿಆರ್‌ ನ ಏಕೀಕರಣ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದು ಕೊಳ್ಳಲಾಯಿತು. ವಾಹನಗಳಲ್ಲಿ ಉಪ ಯೋಗಿಸಲ್ಪಡುವ ಸ್ಮಾರ್ಟ್‌ ಸೆನ್ಸರ್‌ಗಳ ಶ್ರೇಣಿಯನ್ನು ಸ್ವಾಯತ್ತ ಚಾಲನೆಗೆ ಸಂಬಂಧಪಟ್ಟಂತೆ ವಿವರಿಸುತ್ತದೆ.

ಮೈಟ್‌ ಚೇರ್‌ವೆುನ್‌ ರಾಜೇಶ್‌ ಚೌಟ ಮಾತನಾಡಿ, ಬಿಂಗ್‌ಹ್ಯಾಮ್‌ಟನ್‌ ವಿ.ವಿ.ಯೊಂದಿಗೆ ಎಂಒಎಯ ಪ್ರಾಮುಖ್ಯ ಮತ್ತು ಪ್ರಯೋಜನಗಳನ್ನು ತಿಳಿಸಿದರು. ಸ್ವಾಯತ್ತ ವ್ಯವಸ್ಥೆಯ ಕ್ಷೇತ್ರದಲ್ಲಿ ನೂತನ ವಿದ್ಯಾರ್ಥಿ ಯೋಜನೆ ಗಳು ಮತ್ತು ಅಧ್ಯಾಪಕರ ಸಂಶೋಧನ ಆಯ್ಕೆಗಳಿಗೆ ಕಾರ್ಯಾಗಾರವು ಮಾರ್ಗ ಒದಗಿಸುತ್ತದೆ ಎಂದು ಹೇಳಿದ ಅವರು ಈ ಅಲ್ಪಾವ ಧಿ ಕೋರ್ಸಿನ ಪ್ರಾಮುಖ್ಯಯನ್ನು ವಿವರಿಸಿದರು.

ಮೈಟ್‌ ಮತ್ತು ಬಿಯು 2023ರ ಮೇ ತಿಂಗಳಲ್ಲಿ ಮಾಡಿದ ಒಪ್ಪಂದವನ್ನು ಮತ್ತೆ ಐದು ವರ್ಷಗಳಿಗೆ ನವೀಕರಣ ಮಾಡಿದೆ. ಇದು ಎರಡು ಸಂಸ್ಥೆಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next