Advertisement

T20 Cricket; ಪಾಲ್‌ ವಲ್ತಾಟಿ ಅಮೆರಿಕದಲ್ಲಿ ಕೋಚ್‌

12:05 AM Aug 24, 2024 | Team Udayavani |

ಹೊಸದಿಲ್ಲಿ: ದಶಕದ ಹಿಂದೆ ಐಪಿಎಲ್‌ ನಲ್ಲಿ ಹೊಡಿಬಡಿ ಬ್ಯಾಟಿಂಗ್‌ ಮೂಲಕ ಸಂಚಲನ ಮೂಡಿಸಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಪಾಲ್‌ ವಲ್ತಾಟಿ ಹೆಸರು ಮತ್ತೆ ಚಾಲ್ತಿಗೆ ಬಂದಿದೆ. ಅವರೀಗ ಅಮೆರಿಕದಲ್ಲಿ ಕ್ರಿಕೆಟ್‌ ತಂಡವೊಂದರ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ.

Advertisement

ಅಮೆರಿಕದಲ್ಲಿ ಟಿ20 ಕ್ರಿಕೆಟನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಆಯೋಜಿಸಲಾಗುವ ಮೈನರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಪಾಲ್‌ ವಲ್ತಾಟಿ “ಸೀಟ್ಲ ಥಂಡರ್‌ಬೋಲ್ಟ್$Õ’ ತಂಡದ ಪ್ರಧಾನ ತರಬೇತುದಾರನಾಗಿ ನೇಮಿಸಲ್ಪಟ್ಟಿದ್ದಾರೆ. ಈ ತಂಡಕ್ಕೆ ಜಮ್ಮು ಮತ್ತು ಕಾಶ್ಮೀರ ತಂಡದ ಮಾಜಿ ನಾಯಕ ಇಯಾನ್‌ ದೇವ್‌ ಚೌಹಾಣ್‌ ನಾಯಕರಾಗಿರುವರು.

40 ವರ್ಷದ ಪಾಲ್‌ ವಲ್ತಾಟಿ ಕಳೆದ ವರ್ಷ ದೇಶಿ ಕ್ರಿಕೆಟಿಗೆ ವಿದಾಯ ಹೇಳಿದ್ದರು. 5 ಪ್ರಥಮ ದರ್ಜೆ ಪಂದ್ಯ, 4 ಲಿಸ್ಟ್‌ ಎ ಪಂದ್ಯ ಮತ್ತು 34 ಟಿ20 ಪಂದ್ಯಗಳಲ್ಲಿ ಇವರು ಆಡಿದ್ದಾರೆ.

“ಸೀಟ್ಲ ಥಂಡರ್‌ಬೋಲ್ಟ್ಸ್ ಬಿಗ್‌ ಹಿಟ್ಟರ್‌ ಒಬ್ಬರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಆದರೆ ಇವರು ಆಫ್ ಫೀಲ್ಡ್‌ನಲ್ಲಿರುತ್ತಾರೆ. ಪಾಲ್‌ ವಲ್ತಾಟಿ ಸೇರ್ಪಡೆಯನ್ನು ತಿಳಿಸಲು ನಮಗೆ ಬಹಳ ರೋಮಾಂಚನವಾಗುತ್ತಿದೆ’ ಎಂಬುದಾಗಿ ಮೈನರ್‌ ಲೀಗ್‌ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.