Advertisement

ಯೂತ್‌ ಒಲಿಂಪಿಕ್ಸ್‌ಗೆ ಅರ್ಚನಾ

09:52 AM Jun 10, 2018 | Team Udayavani |

ರಾರೊ ಟೊಂಗಾ (ಕುಕ್‌ ಐಲ್ಯಾಂಡ್ಸ್‌): ಬೆಂಗಳೂರಿನ ಟೇಬಲ್‌ ಟೆನಿಸ್‌ ಆಟಗಾರ್ತಿ ಅರ್ಚನಾ ಗಿರೀಶ್‌ ಕಾಮತ್‌ ಅವರು ಆ. 6ರಿಂದ 18ರ ವರೆಗೆ ಆರ್ಜೆಂಟೀನಾದಲ್ಲಿ ನಡೆಯಲಿರುವ 2018ರ ಯೂತ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.

Advertisement

ಇಲ್ಲಿ ನಡೆಯುತ್ತಿರುವ 2018ರ ಯೂತ್‌ ಒಲಿಂಪಿಕ್ಸ್‌ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಾವಳಿಯ ಮಹತ್ವದ ಪಂದ್ಯದಲ್ಲಿ ಮಲೇಶ್ಯದ ಚಾಂಗ್‌ ಅಲೈಸ್‌ ಲೀ ಸಿಯಾನ್‌ ಅವರನ್ನು 11- 5, 9- 11, 11 -8, 11 -9, 11-8 ಅಂತರದಲ್ಲಿ ಮಣಿಸಿದ  ಅರ್ಚನಾ ಕಾಮತ್‌, ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ತಮ್ಮದಾಗಿಸಿಕೊಂಡರು.

ಯೂತ್‌ ಒಲಿಂಪಿಕ್ಸ್‌ಗಾಗಿಯೇ ನಡೆದಿದ್ದ ಎರಡು ಅರ್ಹತಾ ಸುತ್ತುಗಳ ಪಂದ್ಯಾವಳಿಯಲ್ಲಿ ಅರ್ಚನಾ ವಿಫ‌ಲರಾಗಿದ್ದರು. ಟ್ಯುನೀಶಿಯಾದ ರೇಡ್ಸ್‌ನಲ್ಲಿ ನಡೆದಿದ್ದ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಯಶಸ್ಸು ಕಾಣದ ಅವರು, ಅನಂತರ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ವರೆಗೆ ಪಯಣಿಸಿದ್ದರು. ಆದರೆ ಫೈನಲ್‌ ಪ್ರವೇಶಿಸಲು ವಿಫ‌ಲರಾಗಿದ್ದರು. ಹೀಗಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಳ್ಳಲು ಮಲೇಶ್ಯದ ಅರ್ಹತಾ ಟೂರ್ನಿಯೇ ಅವರ ಪಾಲಿಗೆ ಅಂತಿಮ ಅವಕಾಶವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next