Advertisement
ಜಿಲ್ಲೆಯಲ್ಲಿ ನೂರಾರು ಎಕ್ರೆ ಸರಕಾರಿ ಭೂಮಿ ಒತ್ತುವರಿಯಾಗಿದ್ದು, ಬೇಲಿ ನಿರ್ಮಿಸುವ ಮೂಲಕ ಒತ್ತುವರಿ ತೆರುವುಗೊಳಿಸಲಾಗುತ್ತಿದೆ. ಈಗಾಗಲೇ ಲ್ಯಾಂಡ್ ಬೀಟ್ ಆ್ಯಫ್ ಆಧರಿಸಿ ಒತ್ತುವರಿಯಾಗಿರುವ ಭೂಮಿಯ ವಿಸ್ತೀರ್ಣವನ್ನು ಖಚಿತಪಡಿಸಲಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಒತ್ತುವರಿ ತೆರವು ಕಾರ್ಯ ನಡೆಯಲಿದೆ.
Related Articles
Advertisement
ಎಲ್ಲೆಲ್ಲಿ ಎಷ್ಟೆಷ್ಟು ಸಂರಕ್ಷಣೆ?ಕುಂದಾಪುರ ಕೋಟೇಶ್ವರದ ಸರ್ವೆ ನಂಬ್ರ 263/9ರಲ್ಲಿ 0.79 ಎಕ್ರೆ, ಹಕೂìರಿನ ಸರ್ವೆ ನಂಬ್ರ 98ರಲ್ಲಿ 3 ಎಕ್ರೆ, ಕಾರ್ಕಳ ಕಸಬಾದ ಸರ್ವೆನಂಬ್ರ 341/1 ರಲ್ಲಿ 3 ಎಕ್ರೆ, ಕಾರ್ಕಳ ಕಸಬಾದ 616/2ರಲ್ಲಿ 2 ಎಕ್ರೆ, ನಿಟ್ಟೆಯ 360/1ರಲ್ಲಿ 2 ಎಕ್ರೆ, ಉಡುಪಿಯ ಬೊಮ್ಮರಬೆಟ್ಟಿನ 328/2ಎರಲ್ಲಿ 1.44.50 ಎಕ್ರೆ, ಬೈರಂಪಳ್ಳಿ 29/1ರಲ್ಲಿ 1.20 ಎಕ್ರೆ, ಅಂಜಾರಿನ 161.1ಸಿ1ರಲ್ಲಿ 2.95 ಎಕ್ರೆ, ಬ್ರಹ್ಮಾವರದ ವಾರಂಬಳ್ಳಿಯ 200/1ರಲ್ಲಿ 0.79 ಎಕ್ರೆ, ಗಿಳಿಯಾರಿನ 244/1ಸಿ1ರಲ್ಲಿ 0.10 ಎಕ್ರೆ, ಹೆಬ್ರಿ ಕೆರೆಬೆಟ್ಟಿನ 21ರಲ್ಲಿ 5 ಎಕ್ರೆ, ಹೆಬ್ರಿಯ 251ರಲ್ಲಿ 0.10 ಎಕ್ರೆ, ಕಾಪು ಪಡು ಗ್ರಾಮದಲ್ಲಿ 27/1ಎ. ರಲ್ಲಿ 0.72 ಎಕ್ರೆ, 27/1ಬಿ.ರಲ್ಲಿ 0.28 ಎಕ್ರೆ, 27/1ಸಿರಲ್ಲಿ 0.20 ಎಕ್ರೆ, 29/2ಎ3ರಲ್ಲಿ 0.16.77 ಎಕ್ರೆ, 29/2ಸಿರಲ್ಲಿ 0.12 ಎಕ್ರೆ, 115/5ಎ2ಸಿರಲ್ಲಿ 0.30 ಎಕ್ರೆ, ಕಟ್ಟಿಂಗೇರಿ 61/1ರಲ್ಲಿ 013,50 ಎಕ್ರೆ, ಇನ್ನಂಜೆ 8/13ಎರಲ್ಲಿ 0.57 ಎಕ್ರೆ, ಪಾಂಗಾಳ 111/3ಎ1ರಲ್ಲಿ 1.61 ಎಕ್ರೆ, ಹೆಜಮಾಡಿ 246ರಲ್ಲಿ 0.02 ಎಕ್ರೆ ವಿಸ್ತೀರ್ಣದ ಭೂಮಿ ಸ್ವಾಧೀನಕೊಳ್ಳಪಡಿಸಿ ಬೇಲಿ ಅಳವಡಿಸಲಾಗುತ್ತದೆ. ಸರಕಾರಿ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವ ಸಂಬಂಧ ಪಟ್ಟಿ ಸಿದ್ಧಪಡಿಸಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಶೀಘ್ರವೇ ಬೇಲಿ ಅಥವಾ ತಡೆಗೋಡೆ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದೆ.
-ಡಾ| ವಿದ್ಯಾಕುಮಾರಿ, ಜಿಲ್ಲಾಧಿಕಾರಿ ಉಡುಪಿ