Advertisement

ಮುಂಬೈ ಇಂಡಿಯನ್ಸ್- ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳಿಗೆ ಹೊಸ ಕೋಚ್ ಗಳ ನೇಮಕ

01:40 PM Sep 16, 2022 | Team Udayavani |

ಮುಂಬೈ: ಮುಂಬರುವ ಐಪಿಎಲ್ ಗೆ ಈಗಾಗಲೇ ತಯಾರಿ ಆರಂಭವಾಗಿದೆ. ಫ್ರಾಂಚೈಸಿಗಳು ತಮ್ಮ ಸಹಾಯಕ ಸಿಬ್ಬಂದಿಗಳ ಬದಲಾವಣೆ ಮಾಡಿಕೊಳ್ಳುತ್ತಿವೆ. ಇತ್ತೀಚೆಗೆ ಸನ್ ರೈಸರ್ಸ್ ಹೈದರಾಬಾದ್ ತಂಡವು ಬ್ರಿಯಾನ್ ಲಾರಾ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದ ಬೆನ್ನಲ್ಲೇ ಇದೀಗ, ಮುಂಬೈ ಇಂಡಿಯನ್ಸ್- ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳು ತಮ್ಮ ಮುಖ್ಯ ಕೋಚ್ ಗಳನ್ನು ಘೋಷಿಸಿದೆ.

Advertisement

ಮುಂಬೈ ಇಂಡಿಯನ್ಸ್ ಶುಕ್ರವಾರ ಮುಂದಿನ ಐಪಿಎಲ್ ನಿಂದ ತಮ್ಮ ಹೊಸ ಮುಖ್ಯ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಮಾರ್ಕ್ ಬೌಚರ್ ನೇಮಕವನ್ನು ದೃಢಪಡಿಸಿದೆ. ಈ ವಾರದ ಆರಂಭದಲ್ಲಿ, ಕ್ರಿಕೆಟ್ ಸೌತ್ ಆಫ್ರಿಕಾ ಕೋಚ್ ಹುದ್ದೆಯಿಂದ ಬೌಚರ್ ಕೆಳಗಿಳಿಯುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ:ಕಳ್ಳನ ಫಜೀತಿ…ರೆಡ್ ಹ್ಯಾಂಡ್ ಸಿಕ್ಕಿಬಿದ್ದು ರೈಲು ಕಿಟಕಿಗೆ ಜೋತು 10 ಕಿ.ಮೀ ಸಾಗಿದ..!

ಈ ವಾರದ ಆರಂಭದಲ್ಲಿ, ಮುಂಬೈ ಇಂಡಿಯನ್ಸ್‌ನ ಮಾಜಿ ಮುಖ್ಯ ಕೋಚ್ ಮಹೇಲಾ ಜಯವರ್ಧನೆ ಅವರನ್ನು ಫ್ರಾಂಚೈಸಿಯು ಗ್ಲೋಬಲ್ ಪರ್ಫಾರ್ಮೆನ್ಸ್ ಮುಖ್ಯಸ್ಥರನ್ನಾಗಿ ನೇಮಿಸಿತು. ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕರಾಗಿದ್ದ ಜಹೀರ್ ಖಾನ್ ಅವರಿಗೂ ಹೊಸ ಜವಾಬ್ದಾರಿಯನ್ನು ನೀಡಿದ್ದು, ಫ್ರಾಂಚೈಸಿಯ ಗ್ಲೋಬಲ್ ಕ್ರಿಕೆಟ್ ಡೆವಲಪ್‌ಮೆಂಟ್ ಮುಖ್ಯಸ್ಥರಾಗಿರುತ್ತಾರೆ.

Advertisement

ಪಂಜಾಬ್ ಗಿಲ್ಲ ಕುಂಬ್ಳೆ ಬಲ: ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಈ ಬಾರಿ ಕೋಚ್ ಬದಲಾವಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಇದೀಗ ಅಧಕೃತವಾಗಿದ್ದು, ಟ್ರೆವರ್ ಬೇಲಿಸ್ ಅವರನ್ನು ಪಂಜಾಬ್ ಕಿಂಗ್ಸ್ ತಮ್ಮ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ.

ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರ ಬದಲಿಗೆ ಟ್ರೆವರ್ ಬೇಲಿಸ್ ಅವರನ್ನು ನೇಮಕ ಮಾಡಲಾಗಿದೆ. 2019ರಲ್ಲಿ ಇಂಗ್ಲೆಂಡ್ ಏಕದಿನ ವಿಶ್ವಕಪ್ ಗೆದ್ದಾಗ ಬೇಲಿಸ್ ಅವರು ಇಂಗ್ಲೆಂಡ್ ಕೋಚ್ ಆಗಿದ್ದರು. ಅಲ್ಲದೆ ಕೋಲ್ಕತ್ತಾ ನೈಟ್ ರೈಡರ್ಸ್ ಚಾಂಪಿಯನ್ ಆದಾಗ ಮತ್ತು ಬಿಬಿಎಲ್ ನಲ್ಲಿ ಸಿಡ್ನಿ ಸಿಕ್ಸರ್ ಚಾಂಪಿಯನ್ ಆದಾಗ ಆ ತಂಡಗಳ ಕೋಚ್ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next