Advertisement

6 ನಿಗಮಗಳಿಗೆ ಹನ್ನೊಂದು ನಿರ್ದೇಶಕರ ನೇಮಕ: ಸಿಎಂ ತವರು ಹಾವೇರಿ ಜಿಲ್ಲೆಗೆ ಬಂಪರ್‌

09:22 PM Mar 09, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ಚುನಾವಣೆ ಅಧಿಸೂಚನೆಗೆ ದಿನಗಣನೆ ಬೆನ್ನಲ್ಲೇ ರಾಜ್ಯ ಸರ್ಕಾರ ಆರು ನಿಗಮಗಳಿಗೆ ಹನ್ನೊಂದು ನಿರ್ದೇಶಕರ ನೇಮಕಗೊಳಿಸಿ ಆದೇಶ ಹೊರಡಿಸಿದೆ.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಬರುವ ಆರು ನಿಗಮಗಳಿಗೆ ಮುಖ್ಯಮಂತ್ರಿಯವರ ತವರು ಹಾವೇರಿ ಜಿಲ್ಲೆಯವರನ್ನು ನೇಮಿಸಲಾಗಿದೆ.

ರಾಘವೇಂದ್ರ ಭರಮಪ್ಪ- ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಚಿದಾನಂದ ಬಡಿಗೇರ ಮತ್ತು ಓಂಕಾರ-ವಿಶ್ವಕರ್ಮ ಅಭಿವೃದ್ಧಿ ನಿಗಮ, ವಿನಾಯಕ ಯಲ್ಲಪ್ಪ ಶಿಂಧೆ ಮತ್ತು ನಾರಾಯಣ ಪವಾರ- ಮರಾಠ ಅಭಿವೃದ್ಧಿ ನಿಗಮ,-ರುದ್ರಪ್ಪ ಹಡಪದ-ಸವಿತಾ ಸಮಾಜ ಅಭಿವೃದ್ಧಿ ನಿಗಮ, ಪಾಂಡುರಂಗ ಶಂಕರರಾವ್‌ ಮತ್ತು ತಿಪ್ಪಣ್ಣ ಯಲ್ಲಪ್ಪ-ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮ, ರಾಮಚಂದ್ರ ಹನುಮಂತಪ್ಪ, ಕೃಷ್ಣಪ್ಪ ಸುಣಗಾರ್‌ ಮತ್ತು ಬಸವರಾಜ್‌ ಫ‌ಕೀರಪ್ಪ- ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ.

Advertisement

Udayavani is now on Telegram. Click here to join our channel and stay updated with the latest news.

Next