Advertisement

ಆ್ಯಪಲ್‌ ಮಳಿಗೆ ಉದ್ಘಾಟಿಸಿ, ಮೋದಿ ಭೇಟಿ ಮಾಡಲಿದ್ದಾರಾ Apple CEO Tim Cook?

09:04 PM Apr 11, 2023 | Team Udayavani |

ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಆ್ಯಪಲ್‌ ಕಂಪನಿ ತನ್ನ ಚಿಲ್ಲರೆ ಮಳಿಗೆಗಳನ್ನು ತೆರೆಯಲಿದೆ. ಸ್ವತಃ ಸಿಇಒ ಟಿಮ್‌ ಕುಕ್‌ ಭಾರತಕ್ಕೆ ಬರಲಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement

ಏ.18ರಂದು ಮುಂಬೈನಲ್ಲಿ, ಏ.20ರಂದು ನವದೆಹಲಿಯಲ್ಲಿ ಕುಕ್‌ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಈ ನಡುವೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಆ್ಯಪಲ್‌ ವಿಶ್ವದ ಅತ್ಯಂತ ಜನಪ್ರಿಯ ತಾಂತ್ರಿಕ ಕಂಪನಿಗಳಲ್ಲೊಂದಾಗಿದ್ದರೂ, ಭಾರತದಲ್ಲಿ ಅದರ ಉತ್ಪನ್ನಗಳು ಮಾರಾಟವಾಗುವುದು ಕಡಿಮೆ. ಅದರ ಲ್ಯಾಪ್‌ಟಾಪ್‌ಗ‌ಳು , ಮೊಬೈಲ್‌ಗ‌ಳು ವಿಪರೀತ ದುಬಾರಿಯಾಗಿರುವುದೇ ಇದಕ್ಕೆ ಕಾರಣ. ಹೀಗಿದ್ದರೂ ಇಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಉದ್ದೇಶ ಅದಕ್ಕಿರುವುದು ಸಹಜ.

2016ರಲ್ಲಿ ಮೊದಲ ಬಾರಿಗೆ ಟಿಮ್‌ ಕುಕ್‌ ಭಾರತಕ್ಕೆ ಬಂದಿದ್ದರು. ವಿಶೇಷವೆಂದರೆ ಅದೇ ವೇಳೆ ಆ್ಯಪಲ್‌ನ ಐಫೋನ್‌ಗಳು ಭಾರೀ ಮಾರಾಟ ಕಂಡಿದ್ದವು. ಪ್ರಸ್ತುತ ಅಮೆರಿಕ ಮತ್ತು ಚೀನಾದ ನಡುವೆ ಬಿಗುವಿನ ವಾತಾವರಣವಿದೆ. ಹೀಗಾಗಿ ಚೀನಾ ತನಗೆ ಸುರಕ್ಷಿತ ತಾಣವಲ್ಲ ಎಂದು ಆ್ಯಪಲ್‌ಗೆ ಅನ್ನಿಸಿರುವುದರಿಂದ, ಭಾರತದಲ್ಲಿ ಅದು ವಿಸ್ತರಿಸಿಕೊಳ್ಳಲು ಯೋಜಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next