Advertisement

ಚೌಕ್‌ ಪೊಲೀಸರ ವಿರುದ್ಧ ಕ್ರಮಕ್ಕೆ ಮನವಿ

09:58 AM Oct 30, 2021 | Team Udayavani |

ಶಹಾಬಾದ: ಕಲಬುರಗಿ ಚೌಕ್‌ ಪೊಲೀಸ್‌ ಠಾಣೆಯಲ್ಲಿ ದುಂಡಪ್ಪ ಜಮಾದಾರ ಎನ್ನುವ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆಸಿದ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರ ಹಾಗೂ ಗ್ರಾಮೀಣ ಕೋಲಿ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

Advertisement

ಕಲಬುರಗಿಯ ಚೌಕ್‌ ಠಾಣೆ ಪೊಲೀಸರು ವಿನಾಕಾರಣ ದುಂಡಪ್ಪ ಜಮಾದಾರ ಎನ್ನುವರಿಗೆ ವಿನಾಕಾರಣ ತೊಂದರೆ ನೀಡಿ ಯಾವುದೋ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದಾರೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ, ಶಿವಕುಮಾರ ನಾಟೀಕಾರ, ತಿಪ್ಪಣ್ಣ ನಾಟೀಕಾರ, ದೇವೆಂದ್ರ ಕಾರೊಳ್ಳಿ, ಮಲ್ಲು ಮಾಲಗತ್ತಿ, ಶಿವು ಮುತ್ತಗಿ, ಶರಣಬಸ್ಸು, ಶ್ರೀಪತಿ, ಮಲ್ಲು ಸುಣಗಾರ, ಮರಲಿಂಗ ಗೋಳಾ, ರವಿ ಗೋಳಾ, ಪ್ರಭು ಸೀಬಾ, ಪ್ರಭು ಮಂಗಳೂರ, ರಾಜು ಆಡಿನ್‌, ನಾಗರಾಜ ಯಡ್ರಾಮಿ, ನಾಗೇಶ ಮಣ್ಣೂರ್‌, ಶರಣು ಹಲಕರ್ಟಿ, ರಾಜು ಸಣಮೋ, ಮಲ್ಲಿಕಾರ್ಜುನ ನಾಟೀಕಾರ, ಪ್ರಶಾಂತ ಹದನೂರ್‌, ಸಾಗರ ತಳವಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next