Advertisement

ಬೇಬಿಬೆಟ್ಟ ಉಳಿಸಲು ಸಚಿವರಿಗೆ ಮನವಿ

05:50 AM Jun 15, 2020 | Lakshmi GovindaRaj |

ಕೆ.ಆರ್‌.ಪೇಟೆ: ಬೇಬಿಬೆಟ್ಟದ ವ್ಯಾಪ್ತಿಯಲ್ಲಿ ಮತ್ತೆ  ಅಕ್ರಮವಾಗಿ ಆರಂಭವಾಗಿರುವ ಕ್ರಷರ್‌ ನಿಲ್ಲಿಸಬೇಕು. ಬೇಬಿಬೆಟ್ಟ ಉಳಿಸಿ ಕನ್ನಂಬಾಡಿ ಕಟ್ಟೆ ರಕ್ಷಿಸಲು ರೈತ ಹೋರಾಟ ಸಮಿತಿ ಸದಸ್ಯರು ಸಚಿವ ಡಾ.ನಾರಾಯಣಗೌಡರನ್ನು  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ, ಮನವಿ ಸಲ್ಲಿಸಿದರು.

Advertisement

ಬೇಬಿಬೆಟ್ಟದಲ್ಲಿ ಅಕ್ರಮವಾಗಿ ಕ್ರಷರ್‌ಗಳ ಮಾಲೀಕರು ಮೆಗ್ಗರ್‌ ಬ್ಲಾಸ್ಟ್‌, ಬೋರ್‌ ಬ್ಲಾಸ್ಟ್‌ ಸೇರಿದಂತೆ ಸಿಡಿಮದ್ದನ್ನು ಬಳಸಿ ಬಂಡೆಗಳನ್ನು ಸಿಡಿಸಿ ಪರಿಸರ ನಾಶ  ಮಾಡುತ್ತಿದ್ದಾರೆ. ಅಲ್ಲದೇ ಕನ್ನಂಬಾಡಿ ಕಟ್ಟೆಗೂ ಸಂಚಕಾರ ತಂದಿದ್ದಾರೆ. ಬಂಡೆಗಳನ್ನು ಸಿಡಿಸುವಾಗ ಕ್ರಷರ್‌ಗಳಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯಗಳ ಕಾರ್ಮಿಕರಿಗೆ ಸಾವು ನೋವು ಸಂಭವಿಸಿದೆ.

ಜಿಲ್ಲಾಡಳಿತ, ತಾಲೂಕು ಆಡಳಿತ  ರೈತರ ಸಮಸ್ಯೆ ಕೇಳುತ್ತಿಲ್ಲ. ಕ್ರಷರ್‌ ಮಾಲೀಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅಕ್ರಮ ಚಟುವಟಿಕೆಗೆ ಬೆಂಬಲ ನೀಡುತ್ತಿದ್ದಾರೆ ಎಂದು ಸಚಿವರಲ್ಲಿ ದೂರಿದರು. ಮನವಿ ಸ್ವೀಕರಿಸಿದ ಸಚಿವ ನಾರಾಯಣಗೌಡ ಮಾತನಾಡಿ, ಅಕ್ರಮ  ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸುವಂತೆ ಕೂಡಲೇ ಜಿಲ್ಲಾಧಿಕಾರಿಗೆ ಸೂಚನೆ ನೀಡುತ್ತೇನೆ.

ಸ್ಥಳಕ್ಕೆ ಬಂದು ಪರಶೀಲನೆ ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು. ಸಮಿತಿ ಅಧ್ಯಕ್ಷ ಬಿ.ಎಂ.ಸಿದರಾಜು, ಜಿಲ್ಲಾ ಬಿಜೆಪಿ ರೈತ ಮೋರ್ಚಾ  ಅಧ್ಯಕ್ಷ ಎಚ್‌.ಎನ್‌.ಮಂಜುನಾಥ್‌, ರೈತ ಮುಖಂಡರಾದ ಲೋಕೇಶಮೂರ್ತಿ, ಶಿವಾನಂದ, ಯೋಗೇಶ್‌, ಕುಮಾರ, ನಾಗೇಂದ್ರ, ಪದ್ಮರಾಜು, ಅಪ್ಪಾಜಿ, ನಟರಾಜು, ಬಿ.ಎಸ್‌. ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next