Advertisement

ಸ್ತ್ರೀಯರ ಟಾ‹éಕಿಂಗ್‌ ಆ್ಯಪ್‌ ಬಗ್ಗೆ ಕಿಡಿ  

12:30 AM Feb 10, 2019 | Team Udayavani |

ವಾಷಿಂಗ್ಟನ್‌: ಸೌದಿ ಅರೇಬಿಯಾದಲ್ಲಿ ಮಹಿಳೆಯರನ್ನು ಟ್ರ್ಯಾಕ್‌ ಮಾಡಲು ಅನುವು ಮಾಡುವ ಅಬ್‌ಶರ್‌ ಎಂಬ ಆ್ಯಪ್‌ಗೆ ಪ್ಲೇಸ್ಟೋರ್‌ನಲ್ಲಿ ಅವಕಾಶ ನೀಡಿದ್ದಕ್ಕೆ ಆ್ಯಪಲ್‌ ಹಾಗೂ ಗೂಗಲ್‌ ಸಂಸ್ಥೆಗಳ ವಿರುದ್ಧ ಮಾನವ ಹಕ್ಕುಗಳ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಬ್‌ಶರ್‌ ಅಪ್ಲಿಕೇಶನ್‌ನಲ್ಲಿ ತನ್ನ ಪತ್ನಿ ಎಲ್ಲಿದ್ದಾರೆ ಎಂಬುದನ್ನು ಪತಿ ತಿಳಿಯಬಹುದು. ಅಷ್ಟೇ ಅಲ್ಲ, ಪತ್ನಿ ಪ್ರಯಾಣ ಮಾಡಲು ಅನುಮತಿಯನ್ನೂ ನೀಡಬಹುದು. ಒಂದು ವೇಳೆ ಗಡಿಯಲ್ಲಿ ಪಾಸ್‌ಪೋರ್ಟ್‌ ಬಳಸಿದರೆ ಪತಿಗೆ ಸಂದೇಶ ರವಾನೆಯಾಗುತ್ತದೆ. ಈ ಆ್ಯಪ್‌ಗೆ ತನ್ನ ಅಪ್ಲಿಕೇಶನ್‌ ಸ್ಟೋರ್‌ನಲ್ಲಿ ಗೂಗಲ್‌, ಆ್ಯಪಲ್‌ ಅವಕಾಶ ನೀಡಬಾರದು ಎಂದು ಮಾನವ ಹಕ್ಕುಗಳ ರಕ್ಷಣಾ ಸಂಸ್ಥೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಆಗ್ರಹಿಸಿದೆ. ಆದರೆ ಈ ಆ್ಯಪ್‌ ಸೌದಿ ಸರಕಾರ ಅಭಿವೃದ್ಧಿ ಪಡಿಸಿದ್ದು, ಪುರುಷರ ಮೇಲ್ವಿಚಾರಣೆಯಲ್ಲಿ ಪ್ರಯಾಣ ಮಾಡುವುದು ಸೌದಿಯಲ್ಲಿ ಕಡ್ಡಾಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next