Advertisement
ಅಪೂರ್ವ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ನಟಿ ಆಪೂರ್ವ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿರಲಿಲ್ಲ. ಒಂದು ಹಂತಕ್ಕೆ, “ರವಿಚಂದ್ರನ್ ಅವರು ಲಾಂಚ್ ಮಾಡಿದ ಹುಡುಗಿ ಎಲ್ಲಿ ಹೋದಳು. ಅವಕಾಶ ಸಿಗುತ್ತಿಲ್ಲವೆ?’ ಎಂಬ ಮಾತುಗಳು ಕೇಳಿಬಂದುವು. ಅದಕ್ಕೆ ಸರಿಯಾಗಿ ಅಪೂರ್ವ ನಂತರ ಅಪೂರ್ವ ಕೂಡ ಮಾಧ್ಯಮ ಕಣ್ಣಿಗೆ ಬೀಳಲೇ ಇಲ್ಲ. ಹೊಸ ಸಿನಿಮಾದ ಸುದ್ದಿ ಕೂಡಾ ಕೇಳಿಬರಲಿಲ್ಲ. ಎಲ್ಲಾ ಓಕೆ, ಆ ಎರಡು ವರ್ಷದ ಕಥೆ ಏನು ಎಂದರೆ, ಕಾಲೇಜು ಎಂಬ ಉತ್ತರ ಬರುತ್ತದೆ ಅಪೂರ್ವರಿಂದ ಬರುತ್ತದೆ. “ನಾನು ಪಿಯುಸಿನಲ್ಲಿದ್ದಾಗ ನನಗೆ ಅಪೂರ್ವ ಸಿನಿಮಾದ ಆಫರ್ ಬಂತು. ಆ ಸಿನಿಮಾ ಮುಗಿದ ಬಳಿಕ ಮತ್ತೆ ನನ್ನ ಶಿಕ್ಷಣವನ್ನು ಮುಂದುವರೆಸಿದೆ. ಈ ಸಮಯದಲ್ಲಿ ಸಾಕಷ್ಟು ಅವಕಾಶಗಳು ಬಂದರೂ ತಾನು ಒಪ್ಪಲಿಲ್ಲ’ ಎನ್ನುವುದು ಅಪೂರ್ವ ಮಾತು. ಹಾಗಂತ ಅಪೂರ್ವಗೆ ಎರಡು ವರ್ಷ ಸಿನಿಮಾ ಒಪ್ಪಿಕೊಳ್ಳದ ಬಗ್ಗೆ ಯಾವುದೇ ಬೇಸರವಿಲ್ಲವಂತೆ. ಏಕೆಂದರೆ ಸಿನಿಮಾ ಜೊತೆಗೆ ಎಜುಕೇಶನ್ ಕೂಡಾ ಮುಖ್ಯವಾಗುತ್ತದೆ ಎಂಬುದು ಅಪೂರ್ವ ಮಾತು. ಸದ್ಯ ಡಿಗ್ರಿ ಮುಗಿಸಿರುವ ಅಪೂರ್ವಗೆ ಮುಂದೆ ಕನ್ನಡ ಚಿತ್ರರಂಗದಲ್ಲಿ ಬಿಝಿಯಾಗುವ ಆಸೆ ಇದೆ. ಒಳ್ಳೆಯ ಸಿನಿಮಾಗಳನ್ನು ಮಾಡಬೇಕೆಂದು ಅಪೂರ್ವ ಕನಸು ಕಾಣುತ್ತಿದ್ದಾರೆ. ಮೊಡವೆ ಚಿತ್ರದಲ್ಲಿ ಅಪೂರ್ವ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. Advertisement
ಅಪೂರ್ವ ಕನಸುಗಳ್
06:00 AM Oct 14, 2018 | |
Advertisement
Udayavani is now on Telegram. Click here to join our channel and stay updated with the latest news.