Advertisement

ಕರಾವಳಿಗರ ಕ್ಷಮೆ ಯಾಚಿಸಿ: ಕೋಟ

01:00 AM Mar 20, 2019 | Team Udayavani |

ಉಡುಪಿ: “ಬಿಜೆಪಿಗೆ ಮತ ಹಾಕುವ ಕರಾವಳಿಗರಿಗೆ ತಿಳಿವಳಿಕೆ ಕಡಿಮೆ’ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕರಾವಳಿ ಜನತೆಯ ಕ್ಷಮೆ ಕೇಳಬೇಕು ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.

Advertisement

ಉಡುಪಿಯಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಇಂತಹ ಹೇಳಿಕೆ ಮುಖ್ಯಮಂತ್ರಿ ಹುದ್ದೆಯ ಘನತೆಗೆ ತಕ್ಕುದಲ್ಲ. ಮೀನುಗಾರರು ಸೇರಿದಂತೆ ಕರಾವಳಿಯ ಜನತೆಗೆ ಅವರು ಏನು ಕೊಟ್ಟಿದ್ದಾರೆ? ಎಂದು ಪ್ರಶ್ನಿಸಬೇಕಾಗಿದೆ. 

ಬಜೆಟ್‌ನಲ್ಲಿ ಕರಾವಳಿಗೆ ವಿಶೇಷ ಅನುದಾನ ನೀಡದಿದ್ದ ಸಂದರ್ಭ ಕರಾವಳಿಯ ಶಾಸಕರು ಸದನದಲ್ಲಿ ಧರಣಿ ಕುಳಿತುಕೊಂಡಿದ್ದೆವು. ಇದುವರೆಗಿನ ಯಾವ ಮುಖ್ಯಮಂತ್ರಿಗಳು ಕೂಡ ಕರಾವಳಿಗರ ಬಗ್ಗೆ ಇಷ್ಟು ಅವಮಾನಕಾರಿಯಾಗಿ ವ್ಯಂಗ್ಯವಾಗಿ ಮಾತನಾಡಿಲ್ಲ. 

ಇಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರ ಉತ್ತಮವಾಗಿರುವುದಕ್ಕೆ ದೇವೇಗೌಡರ ಕುಟುಂಬ ಕಾರಣವಲ್ಲ. ಕುಟುಂಬ ರಾಜಕಾರಣವನ್ನು ಗಮನಿಸಿ ಕರಾವಳಿ ಜನತೆ ಜೆಡಿಎಸ್‌ಗೆ ಮತ ಹಾಕುವುದಿಲ್ಲ ಎಂಬ ವಿಶ್ವಾಸ ನನಗಿದೆ’ ಎಂದು ಹೇಳಿದರು.

ಲೋಕಪಾಲ ಬೇಕೇ ಬೇಡವೆ?
ಲೋಕಪಾಲ ಸಂಸ್ಥೆ ಜಾರಿಗೆ ತರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ವಿಪಕ್ಷ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು 6 ಸಭೆಗಳಿಗೆ ಆಹ್ವಾನಿಸಿದ್ದರು. ಆದರೆ ಖರ್ಗೆ ಎಲ್ಲ ಸಭೆಗೂ ಗೈರು ಹಾಜರಾಗಿದ್ದರು. ನರೇಂದ್ರ ಮೋದಿಯವರು ಭ್ರಷ್ಟಾಚಾರ ರಹಿತವಾದ ಪಾರದರ್ಶಕ ಆಡಳಿತ ನೀಡಲು ಲೋಕಪಾಲ ತರುತ್ತಿದ್ದಾರೆ. ಆದರೆ ಕಾಂಗ್ರೆಸ್‌ಗೆ ಲೋಕಪಾಲ ಬೇಕೋ ಬೇಡವೋ ಎಂಬುದನ್ನು ಆ ಪಕ್ಷ ಸ್ಪಷ್ಟಪಡಿಸಬೇಕು. ರಾಜ್ಯದ ಲೋಕಾಯುಕ್ತವನ್ನು ಮುಗಿಸಿದಂತೆ ಲೋಕಪಾಲ ಕೂಡ ಬೇಡ ಎಂಬ ನಿಲುವು ಕಾಂಗ್ರೆಸ್ಸಿನದ್ದಾಗಿದೆಯೇ? ಎಂದು ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.

Advertisement

ಬಿಜೆಪಿ 2 ಲಕ್ಷ ಮತಗಳ ಅಂತರದ ಗೆಲುವು
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದೆ. ಇಲ್ಲಿ ಗೆಲುವು ಖಚಿತವಾಗಿರುವುದರಿಂದ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ಜಯಪ್ರಕಾಶ ಹೆಗ್ಡೆ ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಂಸದೀಯ ಮಂಡಳಿ ತೀರ್ಮಾನ ಪ್ರಕಟಿಸಲಿದೆ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಬಿಜೆಪಿ ಗೆದ್ದು ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕೆಂಬುದೇ ನಮ್ಮೆಲ್ಲರ ಉದ್ದೇಶ ಎಂದು ಕೋಟ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next