Advertisement

ಎಪಿಎಂಸಿ ಪ್ರಾರಂಭಕ್ಕೆ ವಿಳಂಬ: ರೈತರಿಗೆ ಸಂಕಷ್ಟ

11:05 AM Aug 21, 2017 | Team Udayavani |

ಆಳಂದ: ಪಟ್ಟಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಆರಂಭವಾಗುವುದು ವಿಳಂಬವಾಗುತ್ತಿರುವುದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ. ಹಲವಾರು ವರ್ಷಗಳು ಕಳೆದರೂ ಕೃಷಿ ಉತ್ಪನ್ನ ಮಾರುಕಟ್ಟೆ ಆರಂಭವಾಗದೇ ಇರುವುದರಿಂದ ರೈತರು ಮಧ್ಯವರ್ತಿಗಳಿಗೆ ಮೊರೆ ಹೋಗುವುದು ಅನಿವಾರ್ಯವಾಗಿದ್ದು, ಕೃಷಿ ಉತ್ಪನ್ನ ಮಾರಾಟಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನ 136 ಗ್ರಾಮಗಳ ಕೇಂದ್ರವಾಗಿರುವ ಆಳಂದ ಪಟ್ಟಣದಲ್ಲಿ ಪ್ರತಿ ಗುರುವಾರ ಅತ್ಯಂತ ದೊಡ್ಡ ಪ್ರಮಾಣದ ಸಂತೆ ನಡೆಯುತ್ತದೆ. ಸಂತೆಗೆ ಅಗತ್ಯ ಸೌಲಭ್ಯಗಳಾಗಲಿ, ವಾಣಿಜ್ಯ ಅಡತಗಳಾಗಲ್ಲಿ ಇಲ್ಲ. ಕಷ್ಟ ನಷ್ಟದ ಮಧ್ಯೆ ಬೆಳೆದು ತಂದ ಆಹಾರ ಧಾನ್ಯಗಳನ್ನು ರೈತರು ದಲ್ಲಾಳಿಗಳು ಕೇಳಿದ ಬೆಲೆಗೆ ಮಾರಾಟ ಮಾಡುವುದು ಮುಂದುವರಿದಿದೆ. ಇಲ್ಲಿ ಶತಮಾನಗಳಿಂದಲೂ ಎಪಿಎಂಸಿ ಅಥವಾ ಬೃಹತ್‌ ಪ್ರಮಾಣದ ನ್ಯಾಯಯುತ ಖರೀದಿ ಖಾಸಗಿ ಕೇಂದ್ರ ಇಲ್ಲ. ಬೆಲೆ ಕಡಿಮೆ ಇದೆ ಎಂದು ತಂದ ಧಾನ್ಯ ಮರಳಿ ಮನೆಗೆ
ತರುವಂತಿಲ್ಲ. ಮನೆಗೆ ತರುವುದಾದರೆ, ಸಾರಿಗೆ ವೆಚ್ಚ ದುಪ್ಪಟ್ಟಾಗುತ್ತದೆ. ಹೀಗಾಗಿ ಒಮ್ಮೆ ಸಂತೆಗೆ ತೆಗೆದುಕೊಂಡು ಹೋದರೆ, ಮಾರಾಟ ಮಾಡಲೇ ಬೇಕಾದ ಅನಿವಾರ್ಯತೆ ಇದೇ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸರ್ಕಾರ ಕೆಲವು ವರ್ಷಗಳಿಂದ ತೊಗರಿ ಖರೀದಿ ಕೇಂದ್ರ ಆರಂಭಿಸುತ್ತಿದೆ. ಆದರೆ ಸಮಯಕ್ಕೆ ಹಾಗೂ ನಿಗದಿತವಾಗಿ ಎಲ್ಲ ರೈತರ ತೊಗರಿ ಖರೀದಿಯಾಗದೆ ಇರುವುದರಿಂದ ಆರ್ಥಿಕ ಸಂಕಷ್ಟದಿಂದಾಗಿ ಅನೇಕರು ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡಿ ನಷ್ಟ ಅನುಭವಿಸುವುದು ಸಾಮಾನ್ಯ ಸಂಗತಿಯಾಗಿದೆ. ಪಟ್ಟಣದ ಬಸ್‌ ನಿಲ್ದಾಣ
ಬಳಿಯಿರುವ 16 ಎಕರೆ ನಿವೇಶನದಲ್ಲಿ ಮಾರುಕಟ್ಟೆ ಸಂತೆ ಆರಂಭಗೊಳ್ಳುತ್ತಿಲ್ಲ. ಎಪಿಎಂಸಿ ಮಳಿಗೆಗಳು ಎರಡು ವರ್ಷಗಳಿಂದ ಆರಂಭವಾಗಿ ಸ್ವಲ್ಪ ಮಟ್ಟಿಗೆ ವ್ಯಾಪಾರ ವಹಿವಾಟು ನಡೆಯುರುವುದನ್ನು ಬಿಟ್ಟರೆ ತರಕಾರಿ ಮತ್ತು ಅಡತ ಮಾರುಕಟ್ಟೆ ಆರಂಭಿಸುವುದು ವಿಳಂಬವಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next