Advertisement

ಯಾವುದೀ ಪ್ರವಾಹವೂ…

11:55 PM Feb 06, 2020 | Lakshmi GovindaRaj |

ಕಲಬುರಗಿ: ಕೆಲವೇ ತಿಂಗಳ ಹಿಂದೆ ಉ.ಕ. ಬಹುಭಾಗ ನೆರೆಯ ಹೊಡೆತಕ್ಕೆ ನರಳಾಡಿತ್ತು. ಆ ಕಹಿನೆನಪುಗಳು ಇಲ್ಲಿನವರ ಕಣ್ಣಿನಲ್ಲಿ ಮಾಸಿಲ್ಲ. 85ನೇ ಸಾಹಿತ್ಯ ಸಮ್ಮೇಳನದ ಗುಂಗಿನಲ್ಲಿ, ಭಾಷಾಪ್ರೇಮದ ಕಡಲಲ್ಲಿ ಮುಳುಗಿದ ಜನ ಹೀಗೆಯೇ ಸಂಚರಿಸುತ್ತ ಪುಸ್ತಕ ಮಳಿಗೆಗೆ ಕಾಲಿಟ್ಟಾಗ, ಒಮ್ಮೆಲೆ ತಬ್ಬಿಬ್ಬಾಗುತ್ತಿದ್ದರು. ಕಾಲುಬುಡದಲ್ಲಿ ನೀರು ಬಂದಂತಾಗಿ, ಅವಕ್ಕಾಗಿ ನೋಡುತ್ತಿದ್ದರು.

Advertisement

ಇಲ್ಲಿನ ಪುಸ್ತಕ ಮಳಿಗೆಯಲ್ಲಿ, ಕರ್ನಾಟಕ ಫೋಟೊ ಜರ್ನಲಿಸ್ಟ್‌ ಅಸೋಸಿಯೇಶನ್‌, ಪ್ರವಾಹ ಚಿತ್ರಗಳನ್ನು ಪ್ರದರ್ಶಿಸುತ್ತಿದೆ. ಛಾಯಾಗ್ರಾಹಕರು ಪ್ರವಾಹದಲ್ಲಿ ಓಡಾಡಿ, ಸೆರೆಹಿಡಿದ ಚಿತ್ರಗಳು, ಮನಕಲಕುವ ಕಥೆ ಹೇಳುತ್ತಿವೆ. ನೆರೆಯ ಹಾವಳಿಯನ್ನು ಕಣ್ಣಾರೆ ನೋಡಿದವರಿಗೆ, ಈ ಚಿತ್ರಗಳು ಹಳೇ ಕಹಿನೆನಪುಗಳನ್ನು ಕೆದಕಿದರೆ, ಪ್ರವಾಹದ ಬಗ್ಗೆ ಕೇಳಿದ್ದವರು, “ಛೇ ಎಂಥ ದಯನೀಯ ಸ್ಥಿತಿ’ ಎನ್ನುತ್ತಾ, ಮಮ್ಮಲ ಮರುಗುತ್ತಿದ್ದರು.

ನೆರೆಗೆ ನಲುಗಿದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಭಾಗದ ಜನ ಸಮ್ಮೇಳನಕ್ಕೆ ಬರುತ್ತಿದ್ದಾರೆ. “ಪ್ರವಾಹದಿಂದಾಗಿ ನಮ್ಮ ಬದುಕು ಇನ್ನೂ ಚೇತರಿಸಿಕೊಂಡಿಲ್ಲ. ಮನೆ-ಮಠ ಕಳೆದುಕೊಂಡು, ಬೀದಿಯಲ್ಲಿ ನಿಂತಿದ್ದೇವೆ. ಈ ಚಿತ್ರಗಳು ನಮ್ಮ ಸಂಕಷ್ಟಗಳನ್ನು ಹೇಳುತ್ತಿವೆ’ ಎಂದರು ಬಾಗಲಕೋಟೆಯಿಂದ ಬಂದಿದ್ದ ಸಂಗಮೇಶ ಹಿರೇಮಠ. ಛಾಯಾಗ್ರಾಹಕರು ಸಾಕಷ್ಟು ಶ್ರಮಪಟ್ಟು ಫೋಟೊಗಳನ್ನು ತೆಗೆದಿದ್ದಾರೆ. ಆಯ್ದ ಚಿತ್ರಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ’ ಎಂದು ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ಶರಣಬಸವ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next