Advertisement

ಭಾರತದಲ್ಲಿ ತಯಾರಾಗುವ ವಿದೇಶಿ ಚಿತ್ರಗಳಿಗೆ ಪ್ರೋತ್ಸಾಹ

12:32 AM May 19, 2022 | Team Udayavani |

ಹೊಸದಿಲ್ಲಿ: ಭಾರತದಲ್ಲಿ ನಿರ್ಮಾಣಗೊಳ್ಳಲಿರುವ ವಿದೇಶಿ ಸಿನೆಮಾಗಳಿಗೆ ನಗದು ಪ್ರೋತ್ಸಾಹಕ ನೆರವು ಮತ್ತು ಇತರ ನೆರವಿನ ಕ್ರಮಗಳನ್ನು ಕೇಂದ್ರ ಸರಕಾರ ಬುಧವಾರ ಪ್ರಕಟಿಸಿದೆ.

Advertisement

ಫ್ರಾನ್ಸ್‌ನ ಕೇನ್ಸ್‌ನ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌, ಭಾರತದಲ್ಲಿ ನಿರ್ಮಾಣಗೊಳ್ಳುವ ವಿದೇಶಿ ಸಿನೆಮಾಗಳಿಗೆ ಶೇ. 30ರಷ್ಟು ನಗದು ಪ್ರೋತ್ಸಾಹಕ ನೆರವು ನೀಡಲಾಗುತ್ತದೆ.

ದೇಶದಲ್ಲಿ ಸಿನೆಮಾ ನಿರ್ಮಾಣವಾಗುವ ವೇಳೆ ಶೇ. 15 ಮಂದಿ ಉದ್ಯೋಗಿಗಳು ಭಾರತೀಯರಾಗಿರಬೇಕು. ಹೀಗಿದ್ದಲ್ಲಿ ಭಾರತದಲ್ಲಿ ಚಿತ್ರ ನಿರ್ಮಾಣಕ್ಕೆ ತಗಲಿದ ವೆಚ್ಚದಲ್ಲಿ 50 ಲಕ್ಷ ರೂ.ವರೆಗೆ ಮರುಪಾವತಿ ಮಾಡಲಾಗುತ್ತದೆ. ಅಲ್ಲದೆ ಪೂರ್ತಿ ನಿರ್ಮಾಣ ಭಾರತದಲ್ಲೇ ಆದರೆ ಅದಕ್ಕೆ ತಗಲಿದ ವೆಚ್ಚದಲ್ಲಿ ಗರಿಷ್ಠ 2 ಕೋಟಿ ರೂ. ಮೀರದಷ್ಟು ಮರುಪಾವತಿ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next