Advertisement

ಡ್ರಗ್ಸ್‌ ಕೇಸಿಗೆ ವೈಯಕ್ತಿಕ ನಿಂದನೆ ತಿರುವು

12:46 AM Oct 26, 2021 | Team Udayavani |

ಮುಂಬಯಿ: ನಗರದ ಸಮುದ್ರದಾಚೆ ವಿಲಾಸಿ ನೌಕೆಯಲ್ಲಿ ಡ್ರಗ್ಸ್‌ ಪಾರ್ಟಿ ಪ್ರಕರಣವೀಗ ತೀರಾ ವೈಯಕ್ತಿಕ ಮಟ್ಟ ಕೀಳು ವಾದ-ವಿವಾದಕ್ಕೆ ತಿರುಗಿದೆ.

Advertisement

ಮಹಾರಾಷ್ಟ್ರದ ಸಚಿವ, ಎನ್‌ಸಿಪಿ ಮುಖಂಡ ನವಾಬ್‌ ಮಲಿಕ್‌ ಅವರು ಭಾರತೀಯ ಕಂದಾಯ ಸೇವೆ ಅಧಿಕಾರಿ ಸಮೀರ್‌ ವಾಖೆಂಡೆ ಅವರ ಜಾತಿ ಮತ್ತು ಇತರ ವಿಚಾರಗಳನ್ನು ಕೆದಕಿದ್ದಾರೆ.

ಜತೆಗೆ ವಾಂಖೆಡೆ ಅವರು, ಜನನ ಪ್ರಮಾಣ ಪತ್ರ ಸೇರಿದಂತೆ ಪ್ರಮುಖ ದಾಖಲೆಗಳನ್ನು ನಕಲು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಟ್ವೀಟ್‌ನಲ್ಲಿ “ಸಮೀರ್‌ ದಾವೂದ್‌ ವಾಂಖೆಡೆ ಅವರ ದಾಖಲೆಗಳ ನಕಲು ಇಲ್ಲಿಂದ ಶುರುವಾಗುತ್ತದೆ’ ಎಂದು ಟ್ವೀಟ್‌ ಮಾಡಿ ಫೋಟೋವೊಂದನ್ನು ಅಪ್‌ಲೋಡ್‌ ಮಾಡಿದ್ದಾರೆ.

ಅದರಿಂದ ಕ್ರುದ್ಧಗೊಂಡ 2008ನೇ ಬ್ಯಾಚ್‌ನ ಐಆರ್‌ಎಸ್‌ ಅಧಿಕಾರಿ ವಾಂಖೆಡೆ “ಹೌದು ನನ್ನ ತಾಯಿ ಮುಸ್ಲಿಂ ಮತ್ತು ತಂದೆ ಹಿಂದೂ ಸಮುದಾಯಕ್ಕೆ ಸೇರಿದವರು.

Advertisement

ಸಚಿವ ಮಲಿಕ್‌ ಇಂಥ ವಿಚಾರಗಳನ್ನು ಬಹಿರಂಗವಾಗಿ ಚರ್ಚೆ ಮಾಡಿರುವುದು ನೋವು ತಂದಿದೆ’ ಎಂದು ಟ್ವೀಟ್‌ನಲ್ಲಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ:ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ದಾವೂದ್‌ ಅಲ್ಲ: ಸಮೀರ್‌ ಅವರ ತಂದೆ ಧ್ಯಾನ್‌ದೇವ್‌ ವಾಂಖೆಡೆ ಮಾತನಾಡಿ “ನನ್ನ ಹೆಸರಿನಲ್ಲಿ ದಾವೂದ್‌ ಇಲ್ಲ. ಶಾಲೆ, ಕಾಲೇಜುಗಳ ದಿನ ಗಳಿಂದಲೇ ಅದೇ ಹೆಸರು ಇದೆ’ ಎಂದಿದ್ದಾರೆ. ದಾವೂದ್‌ ಜತೆಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಈ ನಡುವೆ ವಾಂಖೆಡೆ ಮಂಗಳವಾರ ಹೊಸದಿಲ್ಲಿಗೆ ತೆರಳಿ ಎನ್‌ಸಿಬಿ ಮಹಾ ನಿರ್ದೇಶಕರಿಗೆ ಪ್ರಕರಣದ ವಿವರ ನೀಡಲಿದ್ದಾರೆ.

ಕೋರ್ಟ್‌ ನಕಾರ: ಈ ನಡುವೆ, ಮುಂಬಯಿಯ ವಿಶೇಷ ಕೋರ್ಟ್‌, ಸಾಕ್ಷಿದಾರರು ಮಾಡಿದ ಆರೋಪಗಳನ್ನು ಪರಿಗಣಿಸಬಾರದು ಮತ್ತು ಈ ನಿಟ್ಟಿನಲ್ಲಿ ಆದೇಶ ನೀಡಬಾರದು ಎಂಬ ಎನ್‌ಸಿಬಿ ಮುಂಬಯಿ ಕಚೇರಿ ನಿರ್ದೇಶಕ ಸಮೀರ್‌ ವಾಂಖೆಡೆ ಮನವಿ ತಿರಸ್ಕರಿಸಿದೆ.

ಪಾಂಡೆ ಗೈರು: ಡ್ರಗ್ಸ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಸೋಮವಾರ ವಿಚಾರಣೆಗೆ ಗೈರು ಹಾಜರಾಗಿದ್ದರು. ಸತತ ಎರಡು ದಿನಗಳಿಂದ ಅವರಿಂದ ಮಾಹಿತಿ ಪಡೆಯಲಾಗುತ್ತಿತ್ತು. ಇದೇ ವೇಳೆ 25 ಕೋಟಿ ರೂ. ಲಂಚದ ಆರೋಪ ಮಾಡಿದ ಪ್ರಭಾಕರ ಸೈಲ್‌ ಮುಂಬಯಿ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಿ ರಕ್ಷಣೆ ನೀಡಲು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next