Advertisement

ತೆರಿಗೆಪಾವತಿದಾರನಿಗೆ ಇನ್ನೊಂದು ಪ್ರಹಾರ: ಇಳಿಯಲಿದೆ SB A/c.ಬಡ್ಡಿದರ

11:29 AM Feb 08, 2017 | udayavani editorial |

ಹೊಸದಿಲ್ಲಿ : ನೋಟು ನಿಷೇಧದ ಪರಿಣಾಮವಾಗಿ ಪ್ರಾಮಾಣಿಕ ತೆರಿಗೆಪಾವತಿದಾರರ ಮೇಲೆ ಇದೀಗ ಇನ್ನೊಂದು ಹೊಡೆತ ಬೀಳಲಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಜನರ ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು ಇಳಿಸಲು ಸರಕಾರ ಉದ್ದೇಶಿಸಿದೆ. ನೋಟು ನಿಷೇಧದ ಬಳಿಕ ಬ್ಯಾಂಕುಗಳಿಗೆ ಕಡಿಮೆ ವೆಚ್ಚದ ಅಪಾರ ಪ್ರಮಾಣದ ಠೇವಣಿ ಹರಿದು ಬಂದಿರುವುದೇ ಇದಕ್ಕೆ ಕಾರಣವಾಗಿದೆ.

Advertisement

ಪ್ರಕೃತ ಭಾರತೀಯ ಬ್ಯಾಂಕುಗಳು ಜನರ ಉಳಿತಾಯ ಖಾತೆಗಳಲ್ಲಿನ ಹಣಕ್ಕೆ ಶೇ.4ರಿಂದ ಶೇ.6ರ ವರೆಗೆ ಬಡ್ಡಿ ನೀಡುತ್ತಿವೆ. ಬಹಳ ದೀರ್ಘ‌ಕಾಲದಿಂದ ಈ ಬಡ್ಡಿ ದರ ಚಾಲ್ತಿಯಲ್ಲಿದೆ. 

ಆದರೆ ನೋಟು ನಿಷೇಧದ ಬಳಿಕ ಜನರು ಅಪಾರ ಪ್ರಮಾಣದಲ್ಲಿ ಬ್ಯಾಂಕ್‌ ಖಾತೆಗಳಿಗೆ ತಮ್ಮ ಹಣ ಜಮೆ ಮಾಡಿರುವುದರಿಂದ ಬ್ಯಾಂಕುಗಳ ಬಳಿ ಈಗ ಅತ್ಯಂತ ಕಡಿಮೆ ವೆಚ್ಚದ ಠೇವಣಿಗಳು ರಾಶಿ ಬಿದ್ದಿವೆ. ಹಾಗಾಗಿ ಜನರ ಉಳಿತಾಯ ಖಾತೆಗಳಲ್ಲಿನ ಹಣಕ್ಕೆ ನೀಡುವ ಬಡ್ಡಿದರವನ್ನು ಇಳಿಸುವುದು ಅನಿವಾರ್ಯವಾಗಿದೆ ಎಂದು ಪಂಜಾಬ್‌ ನ್ಯಾಶನಲ್‌ ಬ್ಯಾಂಕ್‌ ನ ಎಂಡಿ ಮತ್ತು ಸಿಇಓ ಆಗಿರುವ ಉಷಾ ಅನಂತಸುಬ್ರಮಣಿಯನ್‌ ಸಿಎನ್‌ಬಿಸಿ 18 ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next