Advertisement

ಮತ್ತೊಂದು ಕಾವೇರಿ ಯೋಜನೆ

05:49 AM Feb 09, 2019 | |

ಬೆಂಗಳೂರು: ನಗರದಲ್ಲಿ ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿರುವ ಸರ್ಕಾರ “ಬೆಂಗಳೂರಿಗೆ ಮತ್ತೂಂದು ಕಾವೇರಿ’ ಯೋಜನೆ ಘೋಷಿಸಿದೆ. ನಗರದ ನೀರಿನ ಸಂಪನ್ಮೂಲಗಳನ್ನು ಉಪಯೋಗಿಸಿ ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ನದಿಗಳಲ್ಲಿ ಮತ್ತೆ ನೀರು ಹರಿಸುವುದು ಯೋಜನೆ ಉದ್ದೇಶವಾಗಿದೆ. 

Advertisement

ಆ ನಿಟ್ಟಿನಲ್ಲಿ ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ಸಾಧ್ಯವಾದಷ್ಟು ನೀರುನ್ನು ಕೊಯ್ಲು ಮಾಡಲು ಸಮಗ್ರ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಜಲಾನಯನ ಪ್ರದೇಶದಲ್ಲಿ ಬರುವ ಎಲ್ಲ ಕೆರೆ ಹಾಗೂ ನೀರು ನಿಲ್ಲುವ ತಾಣಗಳನ್ನು ರಕ್ಷಿಸಿ ಪುನಶ್ಚೇತನಗೊಳಿಸುವುದು, ಮುಂದಿನ ನಿರ್ಮಾನವಾಗುವ ಮನೆಗಳು ಹಾಗೂ ಫ್ಲಾಟ್‌ಗಳಿಂದ ತ್ಯಾಜ್ಯ ನೀರನ್ನು ಎರಡು ಕೊಳಾಯಿಗಳ ಮೂಲಕ ಸಂಗ್ರಹಿಸಿ, ಮಲ ಮೂತ್ರ ಸೇರದ ನೀರನ್ನು ಶುದ್ಧೀಕರಿಸಿ ಪುನರ್‌ ಬಳಕೆ ಮಾಡಲು ಕ್ರಮಕೈಗೊಳ್ಳುವ ಕುರಿತು ಉಲ್ಲೇಖೀಸಲಾಗಿದೆ. 

ಈ ಯೋಜನೆಯಿಂದ ಸುಮಾರು 1,400 ಎಂಎಲ್‌ಡಿ ನೀರು ಬೆಂಗಳೂರಿಗೆ ಹೆಚ್ಚುವರಿಯಾಗಿ ದೊರೆಯಲಿದ್ದು, ಎರಡು ನದಿಗಳು ಮರುಜೀವ ಪಡೆದುಕೊಳ್ಳಲಿವೆ. ಯೋಜನೆಗಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದ್ದು, ಯೋಜನೆ ಅನುಷ್ಠಾನಕ್ಕಾಗಿ 50 ಕೋಟಿ ರೂ. ಒದಗಿಸಲಾಗಿದೆ. 

* ಜೈಕಾ ನೆರವಿನೊಂದಿಗೆ 5,550 ಕೋಟಿ ರೂ.ಗಳ 5ನೇ ಹಂತದ ಕಾವೇರಿ ನೀರು ಸರಬರಾಜು ಯೋಜನೆಯ ಅನುಷ್ಠಾನಕ್ಕೆ 2019-20ರಲ್ಲಿ 500 ಕೋಟಿ ರೂ. ಅನುದಾನ.

* ಬೆಂಗಳೂರು ಸುತ್ತಮುತ್ತಲಿನ 110 ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ಕಲ್ಪಿಸುವ ಯೋಜನೆ ಪೂರ್ಣ.

Advertisement

* ಮಳೆನೀರು ಕಾಲುವೆಗಳಿಗೆ 914 ಸ್ಥಳಗಳಲ್ಲಿ ತ್ಯಾಜ್ಯ ನೀರು ಪ್ರವೇಶಿಸುತ್ತಿದ್ದು, ಅದನ್ನು ತಡೆಯಲು ಮುಂದಿನ 2 ವರ್ಷಗಳಲ್ಲಿ 76.55 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next