Advertisement

Bengaluru: ಕಾವೇರಿ ನೀರು 6ನೇ ಹಂತದ ಯೋಜನೆಗೆ ಸಿದ್ಧತೆ

03:53 PM Nov 01, 2024 | Team Udayavani |

ಬೆಂಗಳೂರು: ಕಾವೇರಿ 5ನೇ ಹಂತದ ಯೋಜನೆಯು ಪೂರ್ಣಗೊಳ್ಳುತ್ತಿದ್ದಂತೆ ಇದೀಗ ಕಾವೇರಿ 6ನೇ ಹಂತದ ಯೋಜನೆಗೆ ಜಲಮಂಡ ಳಿಯು ಸಿದ್ಧತೆ ನಡೆಸಿದೆ. ಸಮಗ್ರ ಯೋಜನಾ ವರದಿ(ಡಿಪಿಆರ್‌) ಪ್ರಕ್ರಿಯೆ ಮುಗಿದ ಬಳಿಕ ಯೋಜನೆ ಪ್ರಾರಂಭವಾಗಲಿದೆ.

Advertisement

ಕಾವೇರಿ 6ನೇ ಹಂತದ ಯೋಜನೆಯ ಡಿಪಿಆರ್‌ ಪ್ರಕ್ರಿಯೆ ನಡೆಯುತ್ತಿದೆ. ಯೋಜನೆ ಕುರಿತು ಪ್ಲ್ರಾನ್‌ ರೂಪಿಸಲು ಡಿಪಿಆರ್‌ಗಾಗಿ ಟೆಂಡರ್‌ ಕರೆಯಲಾಗಿದೆ. ಟೆಂಡರ್‌ ಪಡೆಯುವ ಕಂಪನಿಯು ಡಿಪಿಆರ್‌ ಯೋಜನೆ ಸಿದ್ಧಪಡಿಸಲಿದೆ. 6ನೇ ಹಂತದ ಯೋಜನೆಗೆ ನಿಖರವಾಗಿ ಎಷ್ಟು ದುಡ್ಡು ಖರ್ಚಾಗಲಿವೆ, ಯೋಜನೆ ಹೇಗೆ ಮಾಡಬಹುದು ಎಂಬಿತ್ಯಾದಿ ವಿಚಾರ ಗಳು ಡಿಪಿಆರ್‌ ಪ್ರಕ್ರಿಯೆ ಮುಗಿದ ಬಳಿಕ ತಿಳಿದು ಬರಲಿವೆ. ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ 6ನೇ ಹಂತದ ಕಾವೇರಿ ಯೋಜನೆಗೆ ಸುಮಾರು 7,200 ಕೋಟಿ ರೂ. ತಗುಲುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

6ನೇ ಹಂತದಿಂದ ಎಲ್ಲೆಲ್ಲಿ ಕಾವೇರಿ ನೀರು?: ಬೆಂಗಳೂರು ಅಭಿವೃದ್ಧಿ ಪ್ರಾಧಿ ಕಾರ(ಬಿಡಿಎ) ವ್ಯಾಪ್ತಿಗೆ ಬರುವ ಶಿವರಾಮ ಕಾರಂತ ಬಡಾವಣೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ದೇವನಹಳ್ಳಿ, ಹೊಸಕೋಟೆ, ಆನೇಕಲ್‌, ಬಿಡದಿ ಹಾಗೂ ನೆಲಮಂಗಲ ಪ್ರದೇಶಗಳ ಸುತ್ತ-ಮುತ್ತ ಕಾವೇರಿ ನೀರು ಪೂರೈಕೆಯಾಗಲಿದೆ. ಇದರಿಂದ ಸುಮಾರು 6 ಟಿಎಂಸಿ ಹೆಚ್ಚುವರಿ ಕಾವೇರಿ ನೀರು ನಗರಕ್ಕೆ ಪೂರೈಕೆಯಾಗಲಿವೆ. ನಗರಕ್ಕೆ ಈ ಹಿಂದೆ 1,450 ಎಂಎಲ್‌ಡಿ ಕಾವೇರಿ ನೀರು ಪೂರೈಕೆ ಯಾಗುತ್ತಿತ್ತು.

ಇತ್ತೀಚೆಗೆ ಚಾಲನೆ ಪಡೆದುಕೊಂಡಿರುವ ಕಾವೇರಿ 5ನೇ ಹಂತದ ಯೋಜನೆಯಿಂದ ಹೆಚ್ಚುವರಿ ಯಾಗಿ 775 ಎಂಎಲ್‌ಡಿಯಷ್ಟು ನೀರು ಪೂರೈಸುವ ಸಾಮರ್ಥ್ಯವಿದೆ. ಆದರೆ, ಈ ಯೋಜನೆಯಡಿ ಕಾವೇರಿ ನೀರಿನ ಸಂಪರ್ಕ ಪಡೆದಿರುವ 53 ಗ್ರಾಮಗಳ 55 ಸಾವಿರ ಕಡೆಗಳಿಗೆ 150 ಎಂಎಲ್‌ಡಿ ನೀರು ಹರಿಸಲಾಗುತ್ತಿದೆ. 6ನೇ ಹಂತದ ಯೋಜನೆಯಿಂದ ಹೆಚ್ಚುವರಿಯಾಗಿ 500 ಎಂಎಲ್‌ಡಿ ಕಾವೇರಿ ನೀರು ನಗರಕ್ಕೆ ಹರಿದು ಬರಲಿದೆ. ಈ ಯೋಜನೆಯಿಂದ ನಗರದ ಹೊರ ವಲಯದ ಭಾಗಗಳಲ್ಲಿ ಬೇಸಿಗೆಯಲ್ಲಿ ಕಾಡುತ್ತಿರುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next