Advertisement
ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನ ಆಶ್ರಯದಲ್ಲಿ ರವಿವಾರ ಜರಗಿದ ವಾರ್ಷಿಕ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಸಮ್ಮಾನಿತರನ್ನು ಆನ್‌ಲೈನ್ ಮೂಲಕ ಅಭಿನಂದಿಸಿ ಅವರು ಮಾತನಾಡಿದರು.
2021ನೇ ಸಾಲಿನ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರವನ್ನು “ಮಾಸಾಂ’ ಕಥಾ ಸಂಕಲನಕ್ಕಾಗಿ ಆಂಟನಿ ಬಾಕೂìರ್ ಅವರಿಗೆ, ಇಂದ್ರಧೊಣು ಉದೇಂವ್ ಕೊಂಕಣಿ ಕವಿತಾ ಸಂಕಲನಕ್ಕಾಗಿ ಕವಿ ಉದಯ್ ಮ್ಹಾಂಬರೋ ಅವರಿಗೆ ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ, ಕೊಂಕಣಿ ಭಾಷೆ ಮತ್ತು ಸಂಸ್ಕೃತಿಗೆ ಜೀವಮಾನದ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನವನ್ನು ಕೊಂಕಣಿ ವ್ಯಾಕರಣ ಮತ್ತು ನಿಘಂಟುಕಾರ ಸುರೇಶ ಜಯವಂತ ಬೋರಕಾರ್ ಅವರಿಗೆ ನೀಡಲಾಯಿತು.
Related Articles
Advertisement
ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಸ್ವಾಗತಿಸಿದರು. ಜ್ಞಾನಪೀಠದ ಗರಿಮೆಯಿಂದ ಕೊಂಕಣಿ ಸಾಹಿತ್ಯದ ಕೀರ್ತಿಯನ್ನು ಉತ್ತುಂಗ ಕ್ಕೇರಿಸಿದಕ್ಕೋಸ್ಕರ ದಾಮೋದರ ಮೌಜೊ ಅವರನ್ನು ನಂದಗೋಪಾಲ ಶೆಣೈಯವರು ಟೆಂಪಲ್ಸ್ ಆಫ್ ಗೋವಾ ಕಾಫಿ ಟೇಬಲ್ ಪುಸ್ತಕವನ್ನು ನೀಡಿ ಅಭಿನಂದಿಸಿದರು.
ಟ್ರಸ್ಟಿಗಳಾದ ಮೆಲ್ವಿನ್ ರಾಡ್ರಿಗಸ್, ಪಯ್ಯನೂರು ರಮೇಶ ಪೈ, ಗಿಲ್ಬರ್ಟ್ ಡಿ’ಸೋಜಾ, ಬಿ.ಆರ್. ಭಟ್ ಮತ್ತು ಡಾ| ಕಿರಣ್ ಬುಡ್ಕುಳೆ ಅವರುಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಅಕಾಡೆಮಿ ಅಧ್ಯಕ್ಷ ಡಾ| ಕೆ. ಜಗದೀಶ ಪೈ, ವಿಶ್ವಕೊಂಕಣಿ ಕೇಂದ್ರದ ರಮೇಶ್ ನಾಯಕ್, ಶಕುಂತಳಾ ಕಿಣಿ, ಗುರುದತ್ ಬಂಟ್ವಾಳ್‌ಕಾರ್, ಸಿ.ಡಿ. ಕಾಮತ್ ಉಪಸ್ಥಿತರಿದ್ದರು.
ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯದರ್ಶಿ ಗಿರಿಧರ ಕಾಮತ್ ವಂದಿಸಿದರು. ಸ್ಮಿತಾ ಶೆಣೈ ನಿರೂಪಿಸಿದರು.