ಮುಂಬಯಿ: ಜೆಟ್ ಏರ್ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರ ಪತ್ನಿ ಅನಿತಾ ಗೋಯಲ್ ಅವರು ಮುಂಬೈನ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾದರು.
ಕಳೆದ ಕೆಲ ದಿನಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮುಂಜಾನೆ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ.
ವಾಸ್ತವವಾಗಿ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ನರೇಶ್ ಗೋಯಲ್ ಅವರಿಗೆ ಇತ್ತೀಚೆಗೆ ಅವರ ಪತ್ನಿಯನ್ನು ಭೇಟಿಯಾಗಲು ಷರತ್ತುಬದ್ಧ ಜಾಮೀನು ನೀಡಲಾಗಿತ್ತು.
ಅನಿತಾ ಗೋಯಲ್ ಅವರ ಅಂತ್ಯಕ್ರಿಯೆ ಇಂದು ಮುಂಬೈನಲ್ಲಿ ನಡೆಯಲಿದೆ. ಗೋಯಲ್ ಕುಟುಂಬದಲ್ಲಿ, ಅನಿತಾ ಗೋಯಲ್ ನಂತರ, ಅವರ ಪತಿ ಮತ್ತು ಇಬ್ಬರು ಮಕ್ಕಳಾದ ನಮ್ರತಾ ಮತ್ತು ನಿವಾನ್ ಗೋಯಲ್ ಇದ್ದಾರೆ. ತನ್ನ ಪತ್ನಿ ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಯೊಂದಿಗೆ ಬದುಕಲು ಬಯಸಿರುವುದಾಗಿ ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡಿದ್ದ ನರೇಶ್ ಗೋಯಲ್ ಅವರೂ ಕೂಡ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ ಎಂಬುದು ಬೇಸರದ ವಿಚಾರ.
ಇದನ್ನೂ ಓದಿ: Lok Sabha Polls: ಪಂಜಾಬ್ನ ಖಡೂರ್ ಕ್ಷೇತ್ರದಿಂದ ಖಲಿಸ್ಥಾನ ಉಗ್ರ ಅಮೃತ್ ಸ್ಪರ್ಧೆ