Advertisement
ಬೆಳಗ್ಗೆಯೇ ಗಾಳ ಹಾಕಿ ಮೀನು ಹಿಡಿಯಲು ಹೊಂಚು ಹಾಕಿದ ಕೆಲವರಿಗೆ ಅದೃಷ್ಟದಿಂದ ಐದು ಕೆ.ಜಿ. ವರೆಗಿನ ಮೀನುಗಳು ಸಿಕ್ಕಿಯೇ ಬಿಟ್ಟವು. ಅದನ್ನು ತೂಗಿ ಬಳಿಕ ಆಂಗ್ಲಿಂಗ್ ನಿಯಮದಂತೆ ಪುನಃ ಸಮುದ್ರಕ್ಕೆ ಬಿಡಲಾಯಿತು. ಇನ್ನು ಕೆಲವರು ಗಂಟೆ ಗಟ್ಟಲೆ ಕಾದರೂ ಬೃಹತ್ ಗಾತ್ರದ ಮೀನು ಸಿಗಲಿಲ್ಲ. ಆದರೂ ಜಾಗ ಬದಲಿಸಿ ಮತ್ತೆ ಮೀನು ಹಿಡಿಯುವ ಭರವಸೆಯೊಂದಿಗೆ ಗಾಳ ಹಾಕುವ ಯತ್ನ ಮುಂದುವರಿಸಿದ್ದರು. ಮಲೇಶ್ಯಾ, ಅರಬ್, ಭಾರತದ ವಿವಿಧೆಡೆಯಿಂದ ಆಗಮಿಸಿದ ಸ್ಪರ್ಧಾಳುಗಳು ಅಂತಾರಾಷ್ಟ್ರೀಯ ಮೀನಿಗೆ ಗಾಳ ಸ್ಪರ್ಧೆಯಲ್ಲಿ ಭಾಗವಹಿ ಸಿದ್ದರು. ಶನಿವಾರ ಬೆಳಗ್ಗೆಯಿಂದ ಸಂಜೆವರೆಗೆ ಹಾಗೂ ರವಿವಾರವೂ ಸ್ಪರ್ಧೆ ಜರಗ ಲಿದೆ. ಬಳಿಕ ಅತ್ಯಧಿಕ ಭಾರದ ಹಾಗೂ ಹೆಚ್ಚು ಕೆ.ಜಿ. ಮೀನು ಹಿಡಿದವರಿಗೆ ಪ್ರಶಸ್ತಿ ಕೈ ಹಿಡಿಯಲಿದೆ.
ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತಿದೆ. ಅತೀ ಹೆಚ್ಚು ತೂಕ ವಿಭಾ ಗದಲ್ಲಿ ಪ್ರಥಮ 50,000 ರೂ.,ದ್ವಿತೀಯ 25,000 ರೂ. ಅತೀ ಹೆಚ್ಚು ಸಂಖ್ಯೆ ವಿಭಾಗದಲ್ಲಿ ಪ್ರಥಮ 10,000 ರೂ.,ದ್ವಿತೀಯ 5,000 ರೂ. ನಗದು ಬಹುಮಾನವಿದೆ. ರವಿವಾರ ಸಂಜೆ ಬಹುಮಾನ ವಿತರಣೆ ನಡೆಯಲಿದೆ.
– ಗುರುಪ್ರಸಾದ್ ಪಡುಬಿದ್ರಿ,ಕೋ ಆರ್ಡಿನೇಟರ್