Advertisement

ಆ್ಯಂಡ್ರಾಯ್ಡ್ ಪೈ ಬಿಡುಗಡೆ

06:15 AM Aug 08, 2018 | Karthik A |

ಹೊಸದಿಲ್ಲಿ: ವರ್ಷದ ಕುತೂಹಲದ ಬಳಿಕ ಆ್ಯಂಡ್ರಾಯ್ಡ್ ತನ್ನ 9ನೇ ಸರಣಿಯ ವರ್ಶನ್‌ ಅನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಅಧಿಕೃತವಾಗಿ ‘ಪೈ’ ಎಂಬ ಹೆಸರನ್ನಿಟ್ಟಿದೆ. ಕೆಲವು ದಿನಗಳ ಹಿಂದೆ ಬೇಟಾ ವರ್ಶನ್‌ ಬಿಡುಗಡೆ ಮಾಡಿದ್ದ ಗೂಗಲ್‌ ಇದೀಗ, ಅಧಿಕೃತ ವರ್ಶನ್‌ ಅನ್ನೇ ಬಿಡುಗಡೆ ಮಾಡಿದೆ. ಈಗಾಗಲೇ 1,40,000 ಮಂದಿ ಬೇಟಾ ವರ್ಶನ್‌ ಡೌನ್‌ ಲೋಡ್‌ ಮಾಡಿಕೊಂಡು ಈ ಆ್ಯಂಡ್ರಾಯ್ಡ್ ಪೈ ಅನ್ನು ಪರೀಕ್ಷಿಸಿದ್ದಾರೆ. ಇದು ಆ್ಯಂಡ್ರಾಯ್ಡ್ ಒರಿಯೋನ ಅನಂತರದ ರೂಪ.

Advertisement

ಗೂಗಲ್‌ನ ಪಿಕ್ಸಲ್‌, ಪಿಕ್ಸಲ್‌ ಎಕ್ಸ್‌.ಎಲ್‌, ಪಿಕ್ಸಲ್‌ 2 ಮತ್ತು ಪಿಕ್ಸಲ್‌ 2ಪ್ಲಸ್‌ ನಲ್ಲಿ ಆರಂಭದಲ್ಲಿ ಬಿಡುಗಡೆಯಾಗಲಿದೆ. ಈ ಮೊಬೈಲ್‌ ಫೋನ್‌ಗಳನ್ನು ಹೊಂದಿರುವವರು ಈ ವರ್ಶನ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಆ್ಯಂಡ್ರಾಯ್ಡ್ ಪೈನಲ್ಲಿ ನೂತನ ರೀತಿಯ ನೆವಿಗೇಶನ್‌ ವ್ಯವಸ್ಥೆ ಬಂದಿದೆ. ಅಲ್ಲದೇ ಸಿಂಗಲ್‌ ಹೋಮ್‌ ಬಟನ್‌ ಕೂಡ ಇರಲಿದೆ. ಅಂದರೆ, ಆ್ಯಪಲ್‌ ಐಫೋನ್‌ ಎಕ್ಸ್‌ ರೀತಿಯಲ್ಲೇ ವಿನ್ಯಾಸ ಮಾಡಲಾಗಿದೆ. ಅಲ್ಲದೆ ಅಡಾಪ್ಟೀವ್‌ ಬ್ಯಾಟರಿ ಮತ್ತು ಅಡಾಪ್ಟೀವ್‌ ಬ್ರೈಟ್‌ನೆಸ್‌ ಅನ್ನೂ ಸೇರಿಸಲಾಗಿದೆ. ಆದರೆ ಈ  ಫೀಚರ್‌ ಗಳನ್ನು ಬಳಕೆದಾರರ ಆಯ್ಕೆಗೆ ಬಿಡಲಾಗಿದೆ. ಅವರು ಬೇಕೆಂದಲ್ಲಿ ಮಾತ್ರ ಇದನ್ನು ಉಪಯೋಗಿಸಬಹುದಾಗಿದೆ. 

ಏನಿದು ‘ಪೈ’?: ಇದು ಬ್ರೆಡ್‌ ರೀತಿಯಲ್ಲೇ ಬೇಯಿಸಿದ ಒಂದು ಸಿಹಿ ಖಾದ್ಯ. ಇದನ್ನು ಪೇಸ್ಟ್ರಿಯ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರ ಒಳಗೆ ಸಿಹಿ ಮತ್ತು ಹುಳಿಯ ಹೂರಣ ಇರುತ್ತದೆ. ಇದಕ್ಕೆ ಬೇರೆ ಬೇರೆ ಹಣ್ಣುಗಳ ಹೂರಣವನ್ನೂ ಬಳಕೆ ಮಾಡಲಾಗುತ್ತದೆ. ಹೆಚ್ಚು ಕಡಿಮೆ ಇದು ಈಜಿಪ್ಟ್ ಮೂಲದ್ದು.

Advertisement

Udayavani is now on Telegram. Click here to join our channel and stay updated with the latest news.

Next