Advertisement
ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿತ್ತು. ನಾಂದೇಡ್ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ, 543 ಸದಸ್ಯ ಬಲದ ಲೋಕಸಭೆಯಲ್ಲಿ ಕೇಸರಿ ಪಕ್ಷದ ಸಂಖ್ಯೆ 240.
Related Articles
Advertisement
ಪ್ರಸ್ತುತ, ಮೇಲ್ಮನೆಯಲ್ಲಿ ಬಿಜೆಪಿ ಏಳು ಸದಸ್ಯರನ್ನು ಹೊಂದಿದ್ದು, ಕಾಂಗ್ರೆಸ್ ಮೂರು, ಶಿವಸೇನೆ (ಯುಬಿಟಿ) ಎರಡು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮೂರು, ಎನ್‌ಸಿಪಿ (ಶರದ್ ಪವಾರ್) ಎರಡು ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠವಳೆ) ಒಬ್ಬರು ಸದಸ್ಯರಾಗಿದ್ದಾರೆ.
ರಾಜ್ಯಸಭೆಯಲ್ಲಿ ಬಿಜೆಪಿ 95 ಸಂಸದರನ್ನು ಹೊಂದಿದ್ದು, ಇದರೊಂದಿಗೆ ಮೈತ್ರಿಕೂಟ ಸಂಸದರ ಸಂಖ್ಯೆ 112ಕ್ಕೆ ಏರಿದೆ. ಅಲ್ಲದೆ, ಆಡಳಿತ ಪಕ್ಷವನ್ನು ಬೆಂಬಲಿಸುವ ಆರು ನಾಮನಿರ್ದೇಶಿತ ಸದಸ್ಯರಿದ್ದಾರೆ.
ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಪ್ರತಿನಿಧಿಸುವ ಅತಿ ಹೆಚ್ಚು ಸಂಸದರು ಉತ್ತರ ಪ್ರದೇಶ, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರವಿದೆ.
ಮಹಾರಾಷ್ಟ್ರದಿಂದ ಯಾವುದೇ ತತ್ ಕ್ಷಣದ ಸ್ಥಾನಗಳು ಖಾಲಿಯಿಲ್ಲದಿದ್ದರೂ, ಮೇಲ್ಮನೆಯು ವಿವಿಧ ರಾಜ್ಯಗಳಿಂದ 10 ಖಾಲಿ ಸ್ಥಾನಗಳನ್ನು ಹೊಂದಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಬಿಜೆಪಿ ಗೆಲ್ಲುವ ಸಾಧ್ಯತೆಯಿದೆ. ನಾಮನಿರ್ದೇಶಿತ ಸದಸ್ಯರ ನಾಲ್ಕು ಸ್ಥಾನಗಳೂ ಖಾಲಿ ಇವೆ.245 ಸದಸ್ಯ ಬಲದ ಸದನದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಬಹುಮತವನ್ನು ದಾಟಲು ಸುಲಭವಾಗುತ್ತದೆ.