ಮುಂಬಯಿ: ಅಂಧೇರಿ ಪಶ್ಚಿಮದ ವೀರ ದೇಸಾಯಿ ರೋಡ್‌ನ, ಶ್ರೀ ಮದ್ಭಾರತ ಮಂಡಳಿ ಮುಂಬಯಿ ಇದರ ಶ್ರೀ ಲಕ್ಷ್ಮೀನಾರಾಯಣ ಮಂದಿರದ ಹದಿನೈದನೇ ವಾರ್ಷಿಕ ಪ್ರತಿಷ್ಠಾ ವರ್ಧಂತಿ ಉತ್ಸವವು ಮಾ. 29 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀಕ್ಷೇತ್ರದಲ್ಲಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ವಿಷ್ಣುಮೂರ್ತಿ ಭಟ್ ಮಾಳ ಅವರ ಮಾರ್ಗದರ್ಶನದಲ್ಲಿ, ಕುಂಟಾಡಿ ಸುರೇಶ್ ಭಟ್ ಅವರಿಂದ ಉತ್ಸವ ಬಲಿ, ದಿನೇಶ್ ಕೋಟ್ಯಾನ್ ಜೆರಿಮರಿ ಅವರ ಸ್ಯಾಕೊÕàಫೋನ್ ವಾದನ ಸೇವೆಯನ್ನು ಆಯೋಜಿಸಲಾಗಿತ್ತು.
ದೇವಸ್ಥಾನದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಗ್ಗೆ 8.30 ರಿಂದ ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪ್ರಧಾನ ಹೋಮ, ನವಕ ಕಲಶ ಪೂಜೆ, ಪರಿವಾರ ಸಹಿತ ಶ್ರೀ ಲಕ್ಷ್ಮೀನಾರಾಯಣ ದೇವರಿಗೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಮಹಾಪೂಜೆ, ಆನಂತರ ದೇವರ ಬಲಿ ಉತ್ಸವ ನಡೆಯಲಿದೆ. ಮಧ್ಯಾಹ್ನ 12 ರಿಂದ ಅಪರಾಹ್ನ 3 ರವರೆಗೆ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಸಾವಿರಾರು ಭಕ್ತಾದಿಗಳು ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಮಂದಿರದ ಅಧ್ಯಕ್ಷ ಜಗನ್ನಾಥ ಪಿ. ಪುತ್ರನ್, ಉಪಾಧ್ಯಕ್ಷರುಗಳಾದ ರಘುನಾಥ ಬಿ. ಕುಂದರ್ ಮತ್ತು ಸಂಜೀವ ಬಿ. ಕುಂದರ್, ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಗೌರವ ಜತೆ ಕಾರ್ಯದರ್ಶಿಗಳಾದ ಲೋಕನಾಥ ಪಿ. ಕಾಂಚನ್ ಮತ್ತು ಹರಿಶ್ಚಂದ್ರ ಸಿ. ಕಾಂಚನ್, ಗೌರವ ಪ್ರಧಾನ ಕೋಶಾಧಿಕಾರಿ ಕೇಶವ ಆರ್. ಪುತ್ರನ್, ಪೂಜಾ ಸಮಿತಿಯ ಲೋಕನಾಥ ಒ. ಡಿ. ಮೆಂಡನ್, ಗಂಗಾಧರ ಸಾಲ್ಯಾನ್, ವಾಸು ಉಪ್ಪೂರು, ಆನಂದ ಅಮೀನ್, ಮಹಾಬಲ ಕುಂದರ್, ಗೌರವ ಜತೆ ಕೋಶಾಧಿಕಾರಿಗಳಾದ ನಾರಾಯಣ ಸಿ. ಸುವರ್ಣ ಮತ್ತು ಶ್ಯಾಮ ಕೆ. ಪುತ್ರನ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಇತರ ಪದಾಧಿಕಾರಿಗಳ ನೇತೃತ್ವದಲ್ಲಿ ಮತ್ತು ಉಪಸ್ಥಿತಿಯಲ್ಲಿ ಉತ್ಸವವು ಜರಗಿತು.
ಅಪರಾಹ್ನ 4ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆದಿದ್ದು, ಮುಖ್ಯ ಅತಿಥಿಯಾಗಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಅಧ್ಯಕ್ಷ ಕೃಷ್ಣ ಕುಮಾರ್ ಎಲ್. ಬಂಗೇರ ಅವರು ಪಾಲ್ಗೊಂಡಿದ್ದರು. ಸಂಜೆ ರಂಗಪೂಜೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಸಮಾಜ ಬಾಂಧವರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪೂಜೆಯ ಬಳಿಕ ವಿವಿಧ ನೃತ್ಯಗಳು, ಹೇಮಚಂದ್ರ ಎರ್ಮಾಳ್ ಅವರಿಂದ ಭಕ್ತಿ ರಸಮಂಜರಿ ನಡೆಯಿತು.
ಚಿತ್ರ-ವರದಿ : ಸುಭಾಷ್ ಶಿರಿಯಾ