Advertisement

ನಿಧಿ ಕುಂಭ ಸ್ಥಾಪನೆಯ ಆಮಂತ್ರಣ ಪತ್ರ ಬಿಡುಗಡೆ

01:30 AM Jan 17, 2019 | Harsha Rao |

ಕಾಪು: ಸುಮಾರು  35 ಕೋ. ರೂ. ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳಲಿರುವ‌ ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನದಲ್ಲಿ ಜ. 23ರಂದು ಜರಗಲಿರುವ ನಿಧಿಕುಂಭ ಸ್ಥಾಪನೆಯ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಕಚೆೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. 

Advertisement

ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ  ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಹೊಸ ಮಾರಿಗುಡಿಯು ದೇವಿಗೆ ಪ್ರಿಯವಾದ ಕೆಂಪು ಕಲ್ಲು (ಹಿಲ್‌ಕಲ್‌ ರೆಡ್‌) ಶಿಲೆಯಲ್ಲಿ ಮಾರಿಯಮ್ಮ ಮತ್ತು ಉಚ್ಚಂಗಡಿ ಗುಡಿ ನಿರ್ಮಾಣಗೊಳ್ಳಲಿದೆ. ಈಗಿನ ದೇವಾಲಯ ಪ್ರಾಕಾರದಿಂದ ಸಂಪೂರ್ಣ ಹಿಂದುಗಡೆಯಲ್ಲಿ ಖರೀದಿಸಲಾಗಿರುವ 1.03 ಎಕರೆ ಭೂಮಿಯಲ್ಲಿ 10 ಸಾವಿರ ಚದರ ಮೀಟರ್‌ ವಿಸೀ¤ರ್ಣದೊಂದಿಗೆ, ಭೂಮಟ್ಟದಿಂದ ಸುಮಾರು 7.50 ಅಡಿ ಎತ್ತರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿದೆ ಎಂದರು. 

ಚೋಳ, ಹೊಯ್ಸಳ, ಕದಂಬ, ನೇರ,  ಚಾಲುಕ್ಯ ಶೈಲಿಯಲ್ಲಿ ನಿರ್ಮಾಣ ಕಾರ್ಯ  ಹೊಸ ಮಾರಿಗುಡಿ ದೇಗುಲವು ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿದ್ದು, ಉಡುಪಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಕೊಂಡು ದೇವಸ್ಥಾನದ ನಿಧಿ ಮತ್ತು ಅಭಿವೃದ್ಧಿ ಸಮಿತಿಯ ನಿಧಿ ವಿನಿಯೋಗಿಸಿಕೊಂಡು ಪುನರ್‌ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಚೋಳ, ಹೊಯ್ಸಳ, ಕದಂಬ, ನೇರ ಮತ್ತು ಚಾಲುಕ್ಯ ಶೈಲಿಯಲ್ಲಿ ಮಾರಿಗುಡಿಯ ನವ ನಿರ್ಮಾಣ ಕಾರ್ಯ ನಡೆಯಲಿದ್ದು, ಶಿಲ್ಪಿ ಪಯ್ಯನ್ನೂರು ಶಶಿಧರ ಆಚಾರ್ಯ ಸಮಗ್ರ ಜೀರ್ಣೋದ್ಧಾರ ಕಾರ್ಯ ನಡೆಸಲಿದ್ದಾರೆ. ಬೆಂಗಳೂರಿನ ಪ್ರಸಿದ್ಧ ಗುತ್ತಿಗೆದಾರ ಶಶಿಧರ್‌ ವಾತಿಯಾ ಟೆಂಡರ್‌ ಮೂಲಕ ದೇಗುಲ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿದ್ದಾರೆ ಎಂದರು.

9 ಸಂಖ್ಯೆಗೆ ವಿಶೇಷ ಮಹತ್ವ 
ಹೊಸ ಮಾರಿಗುಡಿಯಲ್ಲಿ ನವದುರ್ಗೆ ಯರ ಒಂಬತ್ತು ಸೋಪಾನ, ಒಂಭತ್ತು ಹಂತ, ಒಂಭತ್ತು ಗೋಪುರಗಳು ಇರುವಂತೆ ನವ ನಿರ್ಮಾಣ ನಡೆಯಲಿದೆ. ಈ ಮೂಲಕ ಸುಂದರ ಶಿಲ್ಪಗಳ ಕಲರವ, ಮನೋಹರ ದೃಶ್ಯಾವಳಿಗಳ ಅನಾವರಣ, ವಾಸ್ತು ವಿನ್ಯಾಸ, ನಿರ್ಮಾಣ ಶೆ„ಲಿಗಳೊಂದಿಗೆ ವಿದ್ವಾಂಸರ,  ವಿಷಯ ತಜ್ಞರ ಸಲಹೆಯಂತೆ ಅಮ್ಮನ ಆಲಯ ಸಿದ್ಧಗೊಳಿಸಲಾಗುವುದು. ನವೀಕರಣ ಗೊಳ್ಳುವ ಈ ಆಲಯವು ಸಂಪೂರ್ಣ ಶಿಲಾಮಯವಾಗಿ ಮೂಡಿ ಬರಲಿದೆ. ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ವಿವಿಧ ಉಪಸಮಿತಿ ರಚಿಸಲಾಗುತ್ತಿದ್ದು, ಸಮಿತಿಯ ರಚನೆಯಲ್ಲೂ 9 ಮಂದಿಯ ತಂಡಗಳ ರಚನೆಗೆ ಒತ್ತು ನೀಡಲಾಗುತ್ತಿದೆ. ನಿಧಿ ಕುಂಭ ಪ್ರತಿಷ್ಟಾಪನೆಗೆ ಪೂರ್ವಭಾವಿ ಯಾಗಿ 99 ಮಂದಿ  ಭಕ್ತರು  ದೀಪ ಬೆಳಗಿಸಿ ನಿಧಿ ಕುಂಭಕ್ಕೆ ಚಾಲನೆ ನೀಡಲಿದ್ದಾರೆ ಎಂದವರು ತಿಳಿಸಿದರು. 

ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಅನಿಲ್‌ ಬಲ್ಲಾಳ್‌ ಬೀಡು, ಪ್ರಧಾನ ಕಾರ್ಯದರ್ಶಿ ರಮೇಶ್‌ ಹೆಗ್ಡೆ ಕಲ್ಯ, ಕೋಶಾಧಿಕಾರಿ ಪ್ರಶಾಂತ್‌ ಕುಮಾರ್‌ ಶೆಟ್ಟಿ, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್‌. 
ಪಾಲನ್‌, ಗಂಗಾಧರ ಸುವರ್ಣ, ಸಲಹೆಗಾರ ನಡಿಕೆರೆ ರತ್ನಾಕರ ಶೆಟ್ಟಿ, ಪ್ರಚಾರ ಸಮಿತಿಯ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಬಾಲಾಜಿ, ಸಮಿತಿ ಪದಾಧಿಕಾರಿಗಳಾದ ನಿರ್ಮಲ್‌ ಕುಮಾರ್‌ ಹೆಗ್ಡೆ, ಶೇಖರ್‌ ಸಾಲ್ಯಾನ್‌, ಜಯರಾಮ ಆಚಾರ್ಯ, ಹರೀಶ್‌ ನಾಯಕ್‌, ಪ್ರಭಾತ್‌ ಶೆೆಟ್ಟಿ, ಶೇಖರ್‌ ಕೋಟ್ಯಾನ್‌, ರಮೇಶ್‌ ಶೆಟ್ಟಿ, ಕೃಷ್ಣ ಕುಮಾರ್‌ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next