ಉಡುಪಿ: ಮೆಲಕಾ ಮಣಿಪಾಲ ವೈದ್ಯಕೀಯ ಕಾಲೇಜಿನ ಅಂಗರಚನಾ ಶಾಸ್ತ್ರ, ಶರೀರ ಶಾಸ್ತ್ರ ಮತ್ತು ಜೀವಶಾಸ್ತ್ರ ವಿಭಾಗ ಇತ್ತೀಚೆಗೆ ಮಾನವ ದೇಹದ ಕುರಿತು ತಿಳಿದುಕೊಳ್ಳಿ ಎಂಬ ಕಾರ್ಯಾಗಾರವನ್ನು ನಡೆಸಿತು.
ಮಣಿಪಾಲ್ ಯೂನಿರ್ವಸಿಟಿ ಪ್ರಕಟಣೆಯ ಪ್ರಕಾರ, ಮೊದಲು ಮಾನವನ ದೇಹದ ಬಗ್ಗೆ ತಿಳಿದುಕೊಳ್ಳಿ ಎಂಬ ಕಾರ್ಯಾಗಾರದಲ್ಲಿ ಉಡುಪಿ ಜಿಲ್ಲೆಯ ಸುಮಾರು 57 ಶಿಕ್ಷಕರು ಭಾಗವಹಿಸಿದ್ದರು. ಈ ಕಾರ್ಯಾಗಾರವನ್ನು ಮಣಿಪಾಲ್ ಯೂನಿರ್ವಸಿಟಿಯ ಉಪ ಕುಲಪತಿ ಎಚ್.ವಿನೋದ್ ಭಟ್ ಉದ್ಘಾಟಿಸಿದ್ದರು.
ಕಳೆದ 6 ದಶಕಗಳ ಕಾಲದಿಂದ ಮಣಿಪಾಲ್ ಯೂನಿರ್ವಸಿಟಿ ಪ್ರಥಮಾನ್ವೇಷಕಗಳನ್ನು ನಡೆಸಿದೆ. ಅಲ್ಲದೇ ಸಾಮಾಜಿಕ ಅರಿವು ಮೂಡಿಸುವ ಹಲವಾರು ಕಾರ್ಯಾಗಾರವನ್ನು ನಡೆಸಿದೆ ಎಂದು ಡಾ.ಭಟ್ ಹೇಳಿದರು.
ಜೀವಶಾಸ್ತ್ರಕ್ಕೆ ಸಂಬಂಧಪಟ್ಟ ಶಿಕ್ಷಕರು ದಿನವಿಡೀ ನಡೆದ ಕಾರ್ಯಾಗಾರದಲ್ಲಿ ಮಾನವ ದೇಹ, ಅಂಗರಚನಾ ಶಾಸ್ತ್ರದ ಕುರಿತು ಮಾಹಿತಿ ಪಡೆದರು.
ಇದೊಂದು ನಿಜಕ್ಕೂ ಕಣ್ಣು ತೆರೆಸುವ ಅನುಭವ. ಪಠ್ಯಪುಸ್ತಕದ ಪಾಠಕ್ಕಿಂತ ಈ ರೀತಿಯ ಕಾರ್ಯಾಗಾರದಿಂದ ಹೆಚ್ಚಿನ ಅನುಭವ ಪಡೆಯಲು ಸಾಧ್ಯ ಎಂದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಶಿಕ್ಷಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಶಿಕ್ಷಕರಿಗೆ ಪ್ರಮಾಣಪತ್ರವನ್ನು ಮಣಿಪಾಲ ಯೂನಿರ್ವಸಿಟಿಯ ಪ್ರೊ. ಪೂರ್ಣಿಮಾ ಬಾಳಿಗಾ ಅವರು ವಿತರಿಸಿದರು.
ಕಾಲೇಜಿನ ಡೀನ್ ಉಲ್ಲಾಸ್ ಕಾಮತ್, ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮೋಹನ್ ದಾಸ್ ರಾವ್, ದೇಹಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕಿರಣ್ಮಯಿ ರೈ ಹಾಗೂ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಗುರುಪ್ರಸಾದ್ ರಾವ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.