Advertisement

Udupi: ಅಸ್ವಸ್ಥಗೊಂಡ ರೈಲು ಪ್ರಯಾಣಿಕೆ ಸಾವು

07:34 PM Jan 01, 2025 | Team Udayavani |

ಉಡುಪಿ: ಮುಂಬಯಿಯಿಂದ ಎರ್ನಾಕುಳಂಗೆ ರೈಲಿನಲ್ಲಿ ಮಗನೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.

Advertisement

ಅಸ್ವಸ್ಥಗೊಂಡ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು, ಕೃತಕ ಉಸಿರಾಟದ ವ್ಯವಸ್ಥೆ ಮಾಡಿದ್ದರು. ಇಂದ್ರಾಳಿ ನಿಲ್ದಾಣದಲ್ಲಿ ರೈಲು ನಿಲುಗಡೆಯಾದಾಗ ರೈಲ್ವೇ ವೈದ್ಯಾಧಿಕಾರಿ ಡಾ| ಸ್ಟೀವನ್‌ ಜಾರ್ಜ್‌ ಅವರು ಆಕೆಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವಿನಿಂದ ಮಣಿಪಾಲದ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಪರೀಕ್ಷಿಸಿದ ವೈದ್ಯರು, ಮಹಿಳೆ ಅಲ್ಲಿಗೆ ತಲುಪುವ ಮೊದಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಮಹಿಳೆಯ ಹೆಸರು ಹಾಗೂ ಇತರ ಮಾಹಿತಿ ತಿಳಿದುಬಂದಿಲ್ಲ.

ನಿಲ್ದಾಣದ ನಿಯಂತ್ರಕ ಭಾನು ಪ್ರಕಾಶ್‌, ರೈಲ್ವೇ ರಕ್ಷಣ ಘಟಕದ ಸುಧೀರ್‌ ಶೆಟ್ಟಿ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next