ನವದೆಹಲಿ: ಭಾರತದಲ್ಲಿ ಜನಪ್ರಿಯವಾಗಿರುವ ಅಮುಲ್ ಎಂದೇ ಕರೆಯಲ್ಪಡುವ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಲಿಮಿಟೆಡ್ ಹಾಲಿನ ಬೆಲೆಯನ್ನು ಲೀಟರ್ ಗೆ 3 ರೂಪಾಯಿ ಏರಿಕೆ ಮಾಡುವುದಾಗಿ ಶುಕ್ರವಾರ (ಫೆ.03) ಘೋಷಿಸಿದೆ.
ಇದನ್ನೂ ಓದಿ
:ಪುತ್ತೂರು: ಕಾರಿಗೆ ಢಿಕ್ಕಿಯಾಗಿ ಬಂಪರ್ ಒಳಗೆ ಸಿಲುಕಿದ ನಾಯಿ
ಹೊಸ ದರದ ಪ್ರಕಾರ ಇಂದಿನಿಂದ ಅಮುಲ್ ಗೋಲ್ಡ್ ಒಂದು ಲೀಟರ್ ಹಾಲಿನ ಬೆಲೆ 66 ರೂಪಾಯಿಗೆ ಏರಿಕೆಯಾಗಿದೆ. ಅಮುಲ್ ತಾಜಾ ಒಂದು ಲೀಟರ್ ಹಾಲಿನ ಬೆಲೆ 54 ರೂಪಾಯಿಗೆ ಏರಿಕೆಯಾಗಿದ್ದು, ಅಮುಲ್ ಕೌ (ದನದ) ಮಿಲ್ಕ್ ಒಂದು ಲೀಟರ್ ಬೆಲೆ 56 ರೂ.ಗೆ ಹೆಚ್ಚಳವಾಗಿದೆ. ಅಮುಲ್ ಎ2 ಬಫೆಲೊ(ಎಮ್ಮೆ) ಮಿಲ್ಕ್ ಒಂದು ಲೀಟರ್ ಹಾಲಿನ ಬೆಲೆ 70 ರೂಪಾಯಿಗೆ ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.
ಪ್ರಸಕ್ತ ಸಾಲಿನಲ್ಲಿ ಅಮುಲ್ ಮೊದಲ ಬಾರಿ ಹಾಲಿನ ದರವನ್ನು ಏರಿಕೆ ಮಾಡಿದೆ. ಅಮುಲ್ ಕಳೆದ ವರ್ಷ ಮೂರು ಬಾರಿ ಹಾಲಿನ ದರವನ್ನು ಏರಿಕೆ ಮಾಡಿತ್ತು. ಕಳೆದ ವರ್ಷ ಮಾರ್ಚ್, ಆಗಸ್ಟ್ ಮತ್ತು ಅಕ್ಟೋಬರ್ ನಲ್ಲಿ ದರ ಹೆಚ್ಚಳ ಮಾಡಿರುವುದಾಗಿ ವರದಿ ತಿಳಿಸಿದೆ.
ಮದರ್ ಡೈರಿ ಕಳೆದ ವರ್ಷ ಡಿಸೆಂಬರ್ ನಲ್ಲಿ ದೆಹಲಿ-ಎನ್ ಸಿಆರ್ ಮಾರುಕಟ್ಟೆಯಲ್ಲಿ ಹಾಲಿನ ಬೆಲೆಯನ್ನು ಲೀಟರ್ ಗೆ 2 ರೂಪಾಯಿಗಳಷ್ಟು ಬೆಲೆ ಹೆಚ್ಚಿಸಿತ್ತು. 2022ರಲ್ಲಿ ಮದರ್ ಡೈರಿ ಐದು ಬಾರಿ ಹಾಲಿನ ದರವನ್ನು ಏರಿಕೆ ಮಾಡಿತ್ತು.
Amul Price Hike, Amul Milk, Amul Gold, Gujarat Cooperative, ಅಮುಲ್ ಹಾಲಿನ ದರ ಏರಿಕೆ, ಅಮುಲ್ ಗೋಲ್ಡ್, ಗುಜರಾತ್ ಕೋ ಆಪರೇಟಿವ್