Advertisement

ಸೀಟಲ್‌ : ಆ್ಯಮ್‌ ಟ್ರ್ಯಾಕ್‌ ಟ್ರೈನ್‌ ಅವಘಡ: 3 ಸಾವು

12:05 PM Dec 19, 2017 | Team Udayavani |

ಡುಪಾಂಟ್‌ : ವೇಗದ ಹೊಸ ರೈಲು ಮಾರ್ಗದಲ್ಲಿ ತನ್ನ ಚೊಚ್ಚಲ ಓಡಾಟವನ್ನು ಕೈಗೊಂಡ ಆ್ಯಮ್‌ಟ್ರಾಕ್‌ ಟ್ರೈನ್‌ನ ಹಲವು ಕಾರ್‌ಗಳು ಅಛಾನಕ್‌ ಕಳಚಿಕೊಂಡು ಅತ್ಯಪಾಯಕಾರಿಯಾಗಿ ಹೈವೇ ಕಡೆಗೆ ಚಲಿಸಿದ ಪರಿಣಾಮವಾಗಿ ಮೂವರು ಮೃತಪಟ್ಟು ಕೆಲವು ಡಜನ್‌ ಮಂದಿ ಗಾಯಗೊಂಡ ಘಟನೆ ಅಮೆರಿಕದ ಸೀಟಲ್‌ನಲ್ಲಿ ನಡೆದಿದೆ.

Advertisement

ಆ್ಯಮ್‌ ಟ್ರ್ಯಾಕ್‌ ಟ್ರೈನಿನಲ್ಲಿ 80 ಮಂದಿ ಪ್ರಯಾಣಿಕರು ಹಾಗೂ ಐವರು ಕರ್ತವ್ಯ ನಿರತ ಚಾಲಕ ಸಿಬಂದಿಗಳು ಇದ್ದರು. ಸುಮಾರು 70 ಮಂದಿಯನ್ನು  ವೈದ್ಯಕೀಯ ಚಿಕಿತ್ಸೆಗಾಗಿ ಒಯ್ಯಲಾಗಿದ್ದು ಈ ಪೈಕಿ 10 ಮಂದಿಯ ಸ್ಥಿತಿ ಗಂಭೀರವಿದೆ. 

ಅಪಘಾತ ಸಂಭವಿಸಿದ ಎರಡು ತಾಸುಗಳ ಬಳಿಕ ಮಾಹಿತಿ ಬಹಿರಂಗಪಡಿಸಿದ ಅಮೆರಿಕದ ಅಧಿಕಾರಿ “ಈ ದುರ್ಘ‌ಟನೆಯಲ್ಲಿ 6 ಮಂದಿ ಮಡಿದಿರವುದಾಗಿ ತನಗೆ ತಿಳಿಸಲಾಗಿದೆ’ ಎಂದು ಹೇಳಿದ್ದರು. ಆದರೆ ಮೃತರ ಸಂಖ್ಯೆ 3 ಎಂಬುದು ಸದ್ಯಕ್ಕೆ ಖಚಿತಪಟ್ಟಿದೆ ಎಂದು ಅನಂತರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next