ಬೆಂಗಳೂರು: ನೋನಿ ಗಿಡದ ಬಹುತೇಕ ಎಲ್ಲ ಭಾಗಗಳು ಔಷಧಿ ಗುಣಗಳನ್ನು ಹೊಂದಿದ್ದು, ಇದರ ಹಣ್ಣಿನ ರಸವಂತೂ ಸರ್ವರೋಗ ನಿವಾರಕ ಔಷಧ. ನೋನಿಯ ವೈಜ್ಞಾನಿಕ ಹೆಸರು ಮೊರಿಂಡಾ ಸಿಟ್ರಿಫೋಲಿಯಾ ರುಬಿಯೇಸಿಯ. ಸಂಸ್ಕೃತದಲ್ಲಿ ಇದನ್ನು ಅಚ್ಚುಕ ಫಲ ಅಥವಾ ಆಯುಷ್ಯ ಎಂದರೆ, ಕನ್ನಡದಲ್ಲಿ ತಗಟೆ ಹಣ್ಣು ಎನ್ನುತ್ತಾರೆ.
ಹೀಗೆ ನಾನಾ ಹೆಸರುಗಳಿಂದ ಪ್ರಚಲಿತ ದಲ್ಲಿರುವ ನೋನಿ ಮೂಲತಃ ನಮ್ಮ ನೆಲದ ಅಮೃತ ಫಲ. ಆರೋಗ್ಯ ಸಂರಕ್ಷಣೆಗೆ ಅಗತ್ಯವಾಗಿ ಬೇಕಾದ ಝರೋನಿನ್ ಅಂಶವುಳ್ಳ ಫಲವಿದು. ನೋನಿ ಎಲೆಯಲ್ಲಿ ನೋವು ನಿವಾರಕ ಗುಣವಿದೆಯಾದ್ದರಿಂದ ಇದನ್ನು “ಪೈನ್ ಕಿಲ್ಲಿಂಗ್ ಟ್ರೀ’ ಎಂತಲೂ, ಹಣ್ಣು ಬೆಣ್ಣೆಯಂತಿರುವುದರಿಂದ “ಚೀಸ್ ಫ್ರೂಟ್’ಎಂತಲೂ, ಹಣ್ಣು ಕೆಟ್ಟ ವಾಸನೆ ಹೊರಸೂಸು ವುದರಿಂದ “ಡೆಡ್ ಮ್ಯಾನ್ ಟ್ರೀ’ ಎಂತಲೂ ಕರೆಯುತ್ತಾರೆ.
ಅಮೃತ ಸಮಾನ ಹಣ್ಣಿನಲ್ಲಿ ಆರೋಗ್ಯ ರಕ್ಷಣೆಗೆ ಪೂರಕವಾದ ಝರೋನಿನ್, ಬೀಟಾ ಕ್ಯಾರೋಟಿನ್, ಕ್ಯಾಲ್ಸಿಯಂ, ಮೆಗ್ನೇ ಷಿಯಂ, ಪೆಕ್ಟಿನ್, ಪೋಟ್ಯಾಷಿಯಂ, ಪ್ರೊಝೆರೋನಿನ್, ಪ್ರೊಝೆರೋ ನಿನೇಸ್, ಬಿ ಮತ್ತು ಸಿ ವಿಟಮಿನ್ ಮುಂತಾದ ಅಂಶ ಗಳಿರುವುದರಿಂದ ನೋನಿಯ ಉತ್ಪನ್ನಗಳು ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿವೆ ಎಂದು ವ್ಯಾಲ್ಯೂ ಪ್ರೊಡಕ್ಟ್$Õ ಸಂಸ್ಥಾಪಕ ಶ್ರೀನಿವಾಸಮೂರ್ತಿ ವಿವರಿಸಿದ್ದಾರೆ.
ವ್ಯಾಲ್ಯೂ ಪ್ರೊಡಕ್ಟ್$Õ ಅಮೃತ್‌ನೋನಿ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶೇಡ್‌ಗಾರ್ ಗುಡ್ಡೆಕೊಪ್ಪದ ರೈತ ಕುಟುಂಬದ ಶ್ರೀನಿವಾಸಮೂರ್ತಿ ಅವರ ಪತ್ನಿ ಅಂಬುಜಾಕ್ಷಿಯವರು ವೈಜ್ಞಾನಿಕ ರೀತಿ ನೋನಿ ರಸ ತಯಾರಿಕೆ ತರಬೇತಿ ಪಡೆದು, ಆಯುಷ್ ಇಲಾಖೆಯಲ್ಲಿ “ಅಮೃತ್‌ನೋನಿ’ ಹೆಸರಿನಲ್ಲಿ ಪರವಾನಗಿ ಪಡೆದಿದ್ದಾರೆ. ಜಿಎಂಪಿ ಮಾನ್ಯತೆಯಲ್ಲಿ ಮಾರಾಟವಾಗುತ್ತಿರುವ ನೋನಿ ಔಷಧ ಪ್ರಸ್ತುತ ಮಾರುಕಟ್ಟೆಯಲ್ಲಿ ಅಮೃತ್‌ನೋನಿ, ಪವರ್ ಪ್ಲಸ್, ಡಿ-ಪ್ಲಸ್ ಹಾಗೂ ಸ್ತ್ರೀ ಸಂಜೀವಿನಿ ಎಂಬ ಉತ್ಪನ್ನಗಳು ವ್ಯಾಲ್ಯೂ ಪ್ರೊಡಕ್ಟ್ಸ್ ನ ಭಾಗವಾಗಿವೆ. ಹೆಚ್ಚಿನ ಮಾಹಿತಿಗೆ ಮೊ.9663367129 ಅಥವಾ
www.valyouproducts.com ಸಂಪರ್ಕಿ ಸಬಹುದು.
ಝರೋನಿನ್ ಎಂಬ ದೈವಾಂಶ ಕಣ: ಝರೋನಿನ್‌ನಿಂದ ರಕ್ತ ಶುದ್ಧೀಕರಣ, ರೋಗ ನಿರೋಧಕ ಶಕ್ತಿ, ಜೀವಕೋಶಗಳಿಗೆ ಮರುಚೈತನ್ಯ, ಮಾನಸಿಕ ಒತ್ತಡ ನಿವಾರಣೆ, ಚರ್ಮ, ಕೂದಲಿನ ರಕ್ಷಣೆ, ಏಕಾಗ್ರತೆ, ಜೀರ್ಣಶಕ್ತಿ, ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಸಾಮರ್ಥ್ಯ, ಪ್ರಮುಖವಾಗಿ ಸಂಧಿವಾತ ನಿವಾರಣೆ, ಕ್ಯಾನ್ಸರ್, ಹೃದ್ರೋಗ ನಿವಾರಣೆ, ಮಧುಮೇಹ ನಿಯಂತ್ರಣ, ಕೀಲುನೋವು, ಋತುಸ್ರಾವ ಸಮಸ್ಯೆ, ಚರ್ಮ ರೋಗ, ಉಬ್ಬಸ, ಆಸ್ತಮಾ, ಖಿನ್ನತೆ, ಅಲರ್ಜಿಗಳ ನಿಯಂತ್ರಣ ಸಾಧ್ಯವೆಂಬುದು ಅನೇಕ ವಿಶ್ವವಿದ್ಯಾಲಯಗಳ ಸಂಶೋಧನೆಯಿಂದ ತಿಳಿದು ಬಂದಿದೆ. ಆದ್ದರಿಂದಲೇ ಝರೋನಿನ್‌ನನ್ನು “ದೈವಾಂಶ ಕಣ’ ಎಂತಲೂ ಕರೆಯುತ್ತಾರೆ. ಕಾರಣ ಇದು ಜೀವಕೋಶದ ಹಂತದಲ್ಲಿ ಪ್ರಮುಖವಾಗಿ ಮೂರು ಅದ್ಭುತ ಕಾರ್ಯಗಳನ್ನು ನಿರ್ವಹಿಸುತ್ತದೆ.