Advertisement

ಅಮಿಶ್‌ ಶಾ- ಪಾಂಡ್ಯ ಬ್ರದರ್  ಭೇಟಿ

11:19 PM Dec 31, 2022 | Team Udayavani |

ಹೊಸದಿಲ್ಲಿ: ತಮ್ಮ ನೂತನ ಕ್ರಿಕೆಟ್‌ ಪಯಣಕ್ಕೆ ಕೇವಲ ಮೂರೇ ದಿನಗಳಿರುವಾಗ ಭಾರತದ ಟಿ20 ನಾಯಕ ಹಾರ್ದಿಕ್‌ ಪಾಂಡ್ಯ ವರ್ಷದ ಕೊನೆಯ ದಿನದಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದರು.

Advertisement

ಶಾ ಅವರ ಹೊಸದಿಲ್ಲಿಯ ಅಧಿಕೃತ ನಿವಾಸದಲ್ಲಿ ಈ ಸೌಹಾರ್ದ ಭೇಟಿ ನಡೆಯಿತು. ಸಹೋದರ ಕೃಣಾಲ್‌ ಪಾಂಡ್ಯ ಕೂಡ ಜತೆಗಿದ್ದರು.

ಅಮಿತ್‌ ಶಾ ಜತೆಗಿನ ಭೇಟಿಯ ಚಿತ್ರಗಳನ್ನು ಹಾರ್ದಿಕ್‌ ಪಾಂಡ್ಯ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಭೇಟಿ ಬಹಳ ಖುಷಿ ಕೊಟ್ಟಿತು ಎಂದೂ ಬರೆದಿದ್ದಾರೆ.

“ತಮ್ಮೊಂದಿಗೆ ಅಮೂಲ್ಯ ಸಮಯವನ್ನು ಕಳೆಯಲು ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಗೌರವಾನ್ವಿತ ಗೃಹ ಸಚಿವರಾದ ಅಮಿತ್‌ ಶಾ ಜೀ ಅವರಿಗೆ ಧನ್ಯವಾದಗಳು. ನಿಮ್ಮನ್ನು ಭೇಟಿ ಯಾದದ್ದು ಗೌರವ ಹಾಗೂ ಹೆಮ್ಮೆಯ ಸಂಗತಿಯಾಗಿದೆ’ ಎಂದಿದ್ದಾರೆ ಹಾರ್ದಿಕ್‌ ಪಾಂಡ್ಯ.

Advertisement

Udayavani is now on Telegram. Click here to join our channel and stay updated with the latest news.

Next