Advertisement
ಈ ಹಿನ್ನೆಲೆಯಲ್ಲೇ ಮೂರು ದಿನಗಳ ರಾಜ್ಯ ಭೇಟಿಗೆ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದು, ಮಂಡ್ಯ, ಬೆಂಗಳೂರು ಹಾಗೂ ಗ್ರಾಮಾಂತರ ಜಿಲ್ಲೆಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು.
Related Articles
Advertisement
ಶಾ ಭೇಟಿ ಕುರಿತು ಬೆಳಗಾವಿಯಲ್ಲಿ ಮಾತ ನಾಡಿರುವ ಸಚಿವ ಡಾ| ಅಶ್ವತ್ಥ ನಾರಾಯಣ, ಅವರ ಭೇಟಿಯಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬರಲಿದೆ.
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷ ಸಂಘಟನೆಗ ಹಾಗೂ ಸಂಖ್ಯೆ ಹೆಚ್ಚಿಸುವ ಪ್ರಯತ್ನಕ್ಕೆ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಮಂಡ್ಯ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಿ ಆ ಭಾಗದ ಜನತೆಯ ಜತೆ ಬಿಜೆಪಿ ಇದೆ ಎಂಬ ಸಂದೇಶ ರವಾನಿಸಲಿದ್ದಾರೆ. ಹಳೆ ಮೈಸೂರು ಭಾಗದವರು ಜೆಡಿಎಸ್ ಕಾಂಗ್ರೆಸ್ ಅನ್ನು ಬಹಳ ನಂಬಿದ್ದರು. ಅದರಿಂದ ಪ್ರಯೋಜನ ಆಗಿಲ್ಲ. ಪಾಂಡವಪುರ ಮೈಶುಗರ್ ಸೇರಿದಂತೆ ಎಲ್ಲ ಅಭಿವೃದ್ಧಿ ಕೂಡ ಬಿಜೆಪಿಯಿಂದಲೇ ಆಗಿದೆ. ಎಲ್ಲ ವರ್ಗದ ಜನರನ್ನು ಪ್ರತಿನಿಧಿಸಿ ಸರ್ವಾಂಗೀಣ ಅಭಿವೃದ್ಧಿಗೆ ನಾವು ಕೆಲಸ ಮಾಡುತ್ತೇವೆ ಎಂದರು.
ಎಲ್ಲೆಡೆಯೂ ಆಡಬಲ್ಲರುಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, “ಒಳ್ಳೆ ಆಟಗಾರ ಯಾವ ಮೈದಾನ (ಪಿಚ್)ವಾದರೂ ಚೆನ್ನಾಗಿ ಆಡುತ್ತಾನೆ. ಅದು ತವರಿನದ್ದಾದರೂ ಸರಿ, ಹೊರಗಿನದ್ದಾದರೂ ಸರಿ. ಅಮಿತ್ ಶಾ ದೇಶದ ಯಾವ ಮೈದಾನದಲ್ಲಿ ಯಾದರೂ ಕ್ರಿಕೆಟ್ ಆಡುತ್ತಾರೆ’ ಎಂದು ಅಭಿ ಪ್ರಾಯ ಪಟ್ಟರು.
ಇಡೀ ರಾಜ್ಯದ ಜತೆಗೆ ಹಳೇ ಮೈಸೂರು ಭಾಗಕ್ಕೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದೇವೆ. ಇನ್ನಷ್ಟು ಸೀಟು ಗೆಲ್ಲಲು ಪ್ರಯ ತ್ನಿಸುತ್ತೇವೆ. ಆ ಭಾಗದಲ್ಲಿ ಮೆಜಾರಿಟಿ ಬಂದ್ರೆ ಅಧಿಕಾರಕ್ಕೆ ಬರೋದು ಸುಲಭ ಎಂದರು. ಈಗ ಪರಿಶ್ರಮ ಹಾಕಿದರೆ ಮುಂದೊಂದು ದಿನ ಲಾಭ ಸಿಗುತ್ತದೆ. ಇನ್ನಷ್ಟು ಸೀಟು ಗೆಲ್ಲುವ ಪ್ರಯತ್ನ ಮಾಡುತ್ತೇವೆ. ಪರಿಶ್ರಮ ಹಾಕಿದರೆ ಮುಂದೂಂದು ದಿನ ಲಾಭ ಸಿಗುತ್ತದೆ. ಹಿಂದಿನ ಚುನಾವಣೆಯಲ್ಲಿ ನಮಗೆ ಅನುಭವವಾಗಿದೆ. ಚಿಕ್ಕಮಗಳೂರು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಈಗ ಪಂಚಾಯಿತಿಯಿಂದ ಸಂಸತ್‌ನವರೆಗೆ ಬಿಜೆಪಿಯಿದೆ. ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ದಲ್ಲೂ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಳೇ ಮೈಸೂರು ಭಾಗದಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ದೇವೆಗೌಡರು ಪ್ರಧಾನಿಯಾಗಿಂದಲೂ ಹಾಸನಕ್ಕೆ ವಿಮಾನ ನಿಲ್ದಾಣದ ಕನಸಿತ್ತು. ಆದರೆ, ಅದು ಸಾಧ್ಯವಾಗಲು ಡಬಲ್ ಇಂಜಿನ ಸರಕಾರ ಬರಬೇಕಾಯಿತು. ಹಾಸನ, ಮಂಡ್ಯ ಎಲ್ಲ ಕಡೆಯೂ ನಮ್ಮ ರಿಪೋರ್ಟ್ ಕಾರ್ಡ್ ಇದೆ ಅದನ್ನು ಮುಂದಿಡುತ್ತೇವೆ. ನಾವು ಹಿಂದುತ್ವ , ಅಭಿವೃದ್ದಿ ಕಾರ್ಯಸೂಚಿಯಿಂದ ಚುನಾವಣೆ ಎದುರಿಸುತ್ತೇವೆ. ಹಿಂದುತ್ವ ಧರ್ಮ (ರಿಲಿಜನ್) ಅಲ್ಲ , ಅದನ್ನು ಅಳವಡಿಸಿಕೊಂಡ ಎಲ್ಲರೂ ಹಿಂದುಗಳೇ.
– ಸಿ.ಟಿ. ರವಿ, ಬಿಜೆಪಿ ನಾಯಕ