ನವದೆಹಲಿ : ‘ಅಮಿತ್ ಶಾ ಗೊಂದಲಕ್ಕೊಳಗಾಗಿದ್ದಾರೆ. ಗುಜರಾತಿನಲ್ಲಿದ್ದಾಗ ಏನು ಮಾಡುತ್ತಿದ್ದರು? ಅವರಿದ್ದಾಗ ಅಲ್ಲಿ ಜಂಗಲ್ ರಾಜ್ ಇತ್ತು’ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಿಡಿ ಕಾರಿದ್ದಾರೆ.
ಇದನ್ನೂ ಓದಿ : ಮಾಜಿ ಸಿಎಂ ಪೋಸ್ಟರ್ ಅಂಟಿಸುವ ಘಟನೆ 75 ವರ್ಷಗಳಲ್ಲಿ ಎಲ್ಲೂ ನಡೆದಿಲ್ಲ: ಸಚಿವ ಸುಧಾಕರ್ ಟೀಕೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರಕಾರವನ್ನು ಬಿಹಾರದಿಂದ ಅಳಿಸಿಹಾಕಲಾಯಿತು. 2024 ರಲ್ಲಿ ಕೇಂದ್ರದಲ್ಲೂ ಅದೇ ಸಂಭವಿಸಲಿದೆ. ಆದ್ದರಿಂದ, ಅವರು ನಮ್ಮ ಮೇಲೆ ಜಂಗಲ್ ರಾಜ್ ಎಂದು ಹೇಳುತ್ತಿದ್ದಾರೆ’ ಎಂದರು.
‘ನಿತೀಶ್ ಕುಮಾರ್ ಮತ್ತು ನಾನು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುತ್ತೇವೆ. ಪ್ರತಿಪಕ್ಷಗಳನ್ನು ಒಗ್ಗೂಡಿಸಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ’ ಎಂದು ಆರ್‌ಜೆಡಿ ಮುಖ್ಯಸ್ಥ ಹೇಳಿದರು.
‘2024ರಲ್ಲಿ ಪ್ರಧಾನಿ ಮೋದಿಯವರನ್ನು ಅಧಿಕಾರದಿಂದ ಕಿತ್ತೊಗೆಯುತ್ತೀರಾ’ ಎಂದು ಕೇಳಿದಾಗ, ‘ಹೌದು,ನಾನು ಇದನ್ನು ಎಷ್ಟು ಬಾರಿ ಹೇಳಬೇಕು’ ಎಂದರು.
ಎರಡು ದಿನಗಳ ಬಿಹಾರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾಘಟ್ ಬಂಧನ್ ಸರಕಾರದ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದು, ‘2024ರಲ್ಲಿ ಲಾಲು-ನಿತೀಶ್ ಜೋಡಿ ನಿರ್ನಾಮವಾಗಲಿದೆ’ ಎಂದು ಗುಡುಗಿದ್ದರು.