Advertisement

ವಿಶ್ವ ಬಾಕ್ಸಿಂಗ್‌ :ಅಮಿತ್‌, ಗೌರವ್‌ ಕ್ವಾರ್ಟರ್‌ ಫೈನಲಿಗೆ

01:01 PM Aug 29, 2017 | |

ಹ್ಯಾಂಬರ್ಗ್‌: ಅಮಿತ್‌ ಪಾಂಗಲ್‌ ಮತ್ತು ಗೌರವ್‌ ಬಿದೂರಿ ಅವರು ತಮ್ಮ ಎದುರಾಳಿಯೆದುರು ಅಮೋಘ ಜಯ ಸಾಧಿಸಿ 19ನೇ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದರು. ಇದೇ ವೇಳೆ ಮಾಜಿ ಕಂಚಿನ ಪದಕ ವಿಜೇತ ಮತ್ತು ಮೂರನೇ ಶ್ರೇಯಾಂಕದ ವಿಕಾಸ್‌ ಕೃಷ್ಣನ್‌ ದ್ವಿತೀಯ ಸುತ್ತಿನ ಕಾದಾಟದಲ್ಲಿ ಸೋತು ಹೊರಬಿದ್ದಿದ್ದಾರೆ. 49 ಕೆ.ಜಿ. ವಿಭಾಗದಲ್ಲಿ ಅಮಿತ್‌ ಪಾಂಗಲ್‌ ಏಳನೇ ಶ್ರೇಯಾಂಕದ ಇಕ್ವಾಡೋರ್‌ನ ಕಾರ್ಲೋಸ್‌ ಕ್ವಿಪೊ ಅವರನ್ನು ಉರುಳಿಸಿ ಅಚ್ಚರಿಯ ಫ‌ಲಿತಾಂಶಕ್ಕೆ ಕಾರಣರಾದರು. ಗೌರವ್‌ ಉಕ್ರೇನಿನ ಮಿಕೋಲ ಬುಟೆಕೊ ಅವರನ್ನು ಕೆಡಹಲು ಯಶಸ್ವಿಯಾದರು.

Advertisement

2011ರ ವಿಶ್ವ ಬಾಕ್ಸಿಂಗ್‌ನಲ್ಲಿ ಕಂಚು ಜಯಿಸಿದ್ದ ವಿಕಾಸ್‌ ಇಂಗ್ಲೆಂಡಿನ ಬೆಂಜಮಿನ್‌ ವಿಟ್ಟಾಕರ್‌ ಅವರಿಗೆ ಶರಣಾದರು. ಏಶ್ಯನ್‌ ಬೆಳ್ಳಿ ವಿಜೇತ ಸುಮಿತ್‌ ಸಂಗವಾನ್‌ 91 ಕೆ.ಜಿ. ವಿಭಾಗದಲ್ಲಿ ಆಸ್ಟ್ರೇಲಿಯದ ಜಾಸನ್‌ ವಾಟೆಲೆ ಅವರೆದುರು ಸೋತು ಹೊರಬಿದ್ದರು. ಮುಂದಿನ ಸುತ್ತಿನಲ್ಲಿ ಅಮಿತ್‌ ಕಠಿನ ಎದುರಾಳಿ ಯನ್ನು ಎದುರಿಸಬೇಕಾಗಿದೆ. ಅವರು ಉಜ್ಬೆಕ್‌ನ  ಹಸನ್‌ಬಾಯ್‌ ದುಷ್ಮಾ ತೋವ್‌ರನ್ನು ಎದುರಿಸ ಬೇಕಾಗಿದೆ. ಗೌರವ್‌ ಟ್ಯುನಿಸಿಯಾದ ಬಿಲೆಲ್‌ ಮಹದಮಿರನ್ನು  ಎದುರಿಸುವರು.

Advertisement

Udayavani is now on Telegram. Click here to join our channel and stay updated with the latest news.

Next