Advertisement
ಹೌದು ಸದ್ಯ ಈ ಅದೃಶ್ಯ ವೈರಾಣುವಿನ ಕಪಿಮಷ್ಟಿಯಲ್ಲಿ ಬಂಧಿಯಾಗಿರುವ ಇಡೀ ವಿಶ್ವವೇ ಕೋವಿಡ್ ಲಸಿಕೆ ಅಭಿವೃದ್ಧಿಯಲ್ಲಿ ಶ್ರಮವಹಿಸಿ ಕಾರ್ಯಾಚರಿಸುತ್ತಿದೆ.
Related Articles
Advertisement
ವಿಶ್ವ ಆರೋಗ್ಯ ಸಂಸ್ಥೆಯ ಈ ಪ್ರಯತ್ನವನ್ನು ಚೀನ ಪ್ರೇರಿತ ಪ್ರತಿಕ್ರಿಯೆ ಹಾಗೂ WHO ಗೆ ಸುಧಾರಣೆಯ ಅವಶ್ಯಕತೆ ಇದೆ. ಅದು ಚೀನದಿಂದ ಹೆಚ್ಚು ಪ್ರಭಾವಿತವಾಗಿದೆ ಎಂದು ಟೀಕಿಸಿದ್ದು, ಅಮೆರಿಕ ಅಧ್ಯಕ್ಷ ಟ್ರಂಪ್ ಈ ಒಕ್ಕೂಟದಿಂದ ಹೊರ ನಡೆಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. WHOದಿಂದ ಹೊರಬರಲಿದೆ ಎಂಬ ಶ್ವೇತಭವನದ ನಿರ್ಧಾರವನ್ನು ಅಮೆರಿಕ ಅನುಸರಿಸಿದೆ ಎಂದು ಹೇಳಲಾಗುತ್ತಿದೆ.
ನಾವು ವೈರಸ್ ವಿರುದ್ಧ ಹೋರಾಡಲು ಅಂತಾರಾಷ್ಟ್ರೀಯ ಪಾಲುದಾರರಿಗೆ ಸಹಕಾರ ನೀಡುತ್ತೇವೆ. ಆದರೆ ಭ್ರಷ್ಟ ಗೊಂಡಿರುವ ಗಏOನಂತಹ, ಚೀನದಿಂದ ಪ್ರಭಾವಿತವಾದ ಬಹುಪಕ್ಷೀಯ ಸಂಸ್ಥೆಯಿಂದ ನಾವು ನಿರ್ಬಂಧಿತರಾಗುವುದಕ್ಕೆ ಬಯಸುವುದಿಲ್ಲ ಎಂದು ಶ್ವೇತಭವನದ ವಕ್ತಾರ ಜುಡ್ ಡೀರೆ ಅಭಿಪ್ರಾಯಪಟ್ಟಿದ್ದಾರೆ.
ಈ ನಿರ್ಧಾರವು WHOನಿಂದ ಅಮೆರಿಕ ಹೊರಬಂದಿದ್ದರ ಪರಿಣಾಮವಾಗಿದೆ. ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುವಲ್ಲಿ ಅಮೆರಿಕವು ತನ್ನ ಜಾಗತಿಕ ನಾಯಕತ್ವವನ್ನು ತ್ಯಜಿಸುತ್ತಿದೆ ಎಂದು ಉತ್ತರ ಅಮೆರಿಕದ ನಿರ್ದೇಶಕ ಟಾಮ್ ಹಾರ್ಟ್ ತಿಳಿಸಿದ್ದಾರೆ.
ಈ ಕ್ರಮವು ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಜೀವವನ್ನು ಅಪಾಯಕ್ಕೆ ತಳ್ಳುವುದು ಮಾತ್ರವಲ್ಲ, ಇದು ಕೋವಿಡ್ ವಿರುದ್ಧದ ಪರಿಣಾಮಕಾರಿ ಲಸಿಕೆಯಿಂದ ಅಮೆರಿಕನ್ನರನ್ನು ಸಂಪೂರ್ಣವಾಗಿ ಪ್ರತ್ಯೇಕಿಸುತ್ತದೆ ಎಂದು ಟಾಮ್ ಹಾರ್ಟ್ ಅಭಿಪ್ರಾಯಪಟ್ಟಿದ್ದಾರೆ.ಆದರೆ ಜಾಜ್ ಟೌನ್ ವಿಶ್ವವಿದ್ಯಾಲಯದ ಜಾಗತಿಕ ಆರೋಗ್ಯ ಕಾನೂನಿನ ಪ್ರಾಧ್ಯಾಪಕರಾದ ಲಾರೆನ್ಸ್ ಗೋಸ್ಟಿನ್ ಅಮೆರಿಕದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಗೋ-ಇಟ್-ಅಲೋನ್ (ಎಲ್ಲವನ್ನೂ ಒಬ್ಬರೇ ಎದುರಿಸುವುದು) ಎಂಬ ಸಿದ್ಧಾಂತವನ್ನು ಅನುಸರಿಸುವ ಮೂಲಕ ಅಮೆರಿಕ ದೇಶವು ಬಹುದೊಡ್ಡ ಜೂಜಾಟಕ್ಕೆ ತನ್ನನ್ನು ತೊಡಗಿಸಿಕೊಳ್ಳುತ್ತಿದೆ ಎಂದಿದ್ದಾರೆ.