ಅಮೆರಿಕ: ನ್ಯೂಯಾರ್ಕ್‌ನ ಟೈಮ್ ಸ್ಕ್ವೇರ್‌ನಲ್ಲಿ ಶ್ರೀರಾಮನ ಫೋಟೋ ಪ್ರದರ್ಶಿಸಲಾಯಿತು. ಜತೆಗೆ ನೂರಾರು ಮಂದಿ ಭಾರತೀಯ ಉಡುಪು ಧರಿಸಿ ಭಜನೆ, ಕೀರ್ತನೆಗಳನ್ನು ಹಾಡಿದರು. ಭಾರತ್ ಮಾತಾ ಕೀ ಜೈ ಎಂದು ಘೋಷಣೆಗಳನ್ನು ಕೂಗಿದರು. ವಿಎಚ್‌ಪಿ ಅಮೆರಿಕ ಘಟಕದ ವತಿಯಿಂದ ಟೆಕ್ಸಸ್, ಇಲಿನಾಯ್ಸ, ನ್ಯೂಯಾರ್ಕ್, ಜಾರ್ಜಿಯಾ ಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಲಾಸ್‌ಏಂಜಲೀಸ್
ಅಮೆರಿಕದ ಲಾಸ್‌ಏಂಜಲೀಸ್‌ನಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 1 ಸಾವಿರ ಮಂದಿ ಭಾಗವಹಿಸಿದ್ದರು.
ಮೈಸಾಚುಸೆಟ್ಸ್
ಇಲ್ಲಿನ ವಾಸೆಸ್ಟ್‌ರ್ ನಗರದಲ್ಲಿನ ಅನಿವಾಸಿ ಭಾರತೀಯರು ಪ್ರಾಣಪ್ರತಿಷ್ಠೆಯ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ನಗರದ ಮೇಯರ್ ಜೋ ಪೆಟ್ಟಿ ಅವರು ಈ ಸಂಭ್ರಮದಲ್ಲಿ ಪಾಲ್ಗೊಂಡು ಶುಭಹಾರೈಸಿದರು.
ಮಾರಿಷಸ್
ದೇಶದಲ್ಲಿ ಶೇ.48 ಮಂದಿ ಹಿಂದೂ ಸಮುದಾಯದವರು. ಅಲ್ಲಿ ಸೋಮವಾರ 2 ಗಂಟೆಗಳ ಕಾಲ ಕಾರ್ಯಕ್ರಮ ವೀಕ್ಷಣೆಗೆ ರಜೆ ಪ್ರಕಟಿಸಲಾಗಿತ್ತು. ಪ್ರಧಾನಿ ಪ್ರವಿಂದ್ ಕುಮಾರ್ ಜುಗನ್ನಾಥ್ ದೇಶದಲ್ಲಿರುವ ಹಿಂದೂ ಸಮುದಾಯದವರಿಗೆ ಶುಭ ಕೋರಿದ್ದಾರೆ.
ವರ್ಜೀನಿಯಾದಲ್ಲಿ ಭಾಗವಹಿಸಿದ ಪಾಕಿಸ್ಥಾನಿ ನಾಗರಿಕರು ವಾಷಿಂಗ್ಟನ್‌ನ ವರ್ಜಿಯಾದ ಎಸ್.ಎಲ್.ಲೋಟಸ್ ಟೆಂಪಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಕಿಸ್ಥಾನಿ ನಾಗರಿಕರು, ಹಿಂದೂ, ಮುಸ್ಲಿಂ, ಸಿಕ್ಖ್ ಸಮುದಾಯದ 2,500ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಟ್ರಿನಿಡಾಡೋ, ಟೊಬಾಗೋ ಕೆರೆಬಿಯನ್ ದ್ವೀಪ ಸಮೂಹದ ರಾಷ್ಟ್ರಗಳಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ವಿವಿಧ ಕಾರ್ಯಕ್ರಮ ಯೋಜಿಸಿದ್ದರು.