Advertisement

‘ಅಮೆರಿಕಾ ಅಮೆರಿಕಾ’ ಚಿತ್ರಕ್ಕೆ 25 ವಸಂತಗಳ ಸಂಭ್ರಮ

01:39 PM Jun 16, 2021 | Team Udayavani |

‘ನೂರು ಜನ್ಮಕೂ ನೂರಾರು ಜನ್ಮಕೂ….’ ಇದು ಎಷ್ಟು ಸಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನಿಸುವ ಸುಮಧುರ ಗೀತೆ. ಈ ಹಾಡು ಕಿವಿಗೆ ಬಿದ್ದಾಗಲೆಲ್ಲ ನೆನಪಾಗುವುದು ಎಂದೂ ಮರೆಯಲಾಗದಂತಹ ‘ಅಮೆರಿಕ ಅಮೆರಿಕ’ ಸಿನಿಮಾ.  ಅಂದು ಇಂದು ಎಂದೆಂದೂ ಮತ್ತೆ ಮತ್ತೆ ನೋಡಬೇಕು ಎನ್ನಿಸುವಂತಹ  ಈ ಅದ್ಭುತ ಸಿನಿಮಾ ತೆರೆ ಕಂಡು ಇಂದಿಗೆ 25 ವರ್ಷಗಳು ತುಂಬಿವೆ.

Advertisement

ಹೌದು, ಸ್ಯಾಂಡಲ್ ವುಡ್ ನಲ್ಲಿ 90 ರ ದಶಕದಲ್ಲಿ ಸೂಪರ್ ಹಿಟ್ ಆಗಿದ್ದ ಅಮೆರಿಕಾ ಅಮೆರಿಕಾ ಚಿತ್ರಕ್ಕೆ ಇಂದಿಗೆ 25 ವಸಂತಗಳ ಸಂಭ್ರಮ. ಈ ವಿಶೇಷ ದಿನವನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಾಯಕ ನಟ ರಮೇಶ್ ಅರವಿಂದ್ ಸ್ಮರಿಸಿಕೊಂಡಿದ್ದಾರೆ.

ಅಮೆರಿಕಾ ಅಮೆರಿಕಾ ಸಿನಿಮಾದ ಹಾಡುಗಳು ಇಂದಿಗೂ ಹಿಟ್. ರಾಜೇಶ್ ಕೃಷ್ಣ ಧ್ವನಿಯಲ್ಲಿ ನೂರು ಜನ್ಮಕೂ ಹಾಡು ಇಂದಿನ ಜನರೇಷನ್ ನವರಿಗೂ ಫೇವರಿಟ್ ಹಾಡು. ರಮೇಶ್ ಅರವಿಂದ್-ಹೇಮಾ ಪಂಚಮುಖಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಸಿನಿಮಾದ ಹೆಚ್ಚಿನ ಭಾಗ ಅಮೆರಿಕಾದಲ್ಲೇ ಚಿತ್ರೀಕರಣವಾಗಿತ್ತು. ಪಕ್ಕಾ ನಾಗತಿಹಳ್ಳಿ ಚಂದ್ರಶೇಖರ್ ಅಭಿರುಚಿಯ ಸಿನಿಮಾ ಇದಾಗಿತ್ತು.

ರಮೇಶ್ ಅರವಿಂದ್ ಸಾಮಾಜಿಕ ಜಾಲತಾಣದಲ್ಲಿ ಈ ಸಿನಿಮಾ ಚಿತ್ರೀಕರಣದ ಮೊದಲ ದಿನದ ಫೋಟೋ ಹಾಕಿಕೊಂಡರೆ, ನಾಗತಿಹಳ್ಳಿ ಚಂದ್ರಶೇಖರ್ ಕೂಡಾ ಈ ಸಿನಿಮಾ ಮಾಡಿದ ಹೆಗ್ಗಳಿಕೆಗಳ ವಿಡಿಯೋವೊಂದನ್ನು ಹಾಕಿ ಇದೊಂದು ಸುಂದರ ನೆನಪು ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next