Advertisement

ಸಮಾನತೆಯ ಸಂದೇಶ ಸಾರಿದ ಸಂವಿಧಾನ ಶಿಲ್ಪಿ

04:22 PM Apr 15, 2023 | Team Udayavani |

ಎಚ್‌.ಡಿ.ಕೋಟೆ: ಸಂವಿಧಾನದ ಪಿತಾಮಹ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಆಚರಣೆಗೆ ನೀತಿ ಸಂಹಿತಿ ಅಡ್ಡಿಪಡಿಸುವುದು ಸರಿಯಲ್ಲ ಎಂದು ತಾಲೂಕು ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್‌.ಸಿ.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಅಂಬೇಡ್ಕರ್‌ ಸಮುದಾಯ ಭವನ ದಲ್ಲಿ ತಾ.ಆಡಳಿತದಿಂದ ಆಯೋಜಿಸಿದ್ದ ಡಾ.ಬಿ. ಆರ್‌.ಅಂಬೇಡ್ಕರ್‌ ಜಯಂತಿ ಸರಳ ಆಚರಣೆ ಸಮಾರಂಭ ಕುರಿತು ಮಾತನಾಡಿದ ಅವರು, ಈ ದೇಶವಷ್ಟೇ ಅಲ್ಲದೆ ಇಡೀ ವಿಶ್ವವೇ ಒಪ್ಪಿಕೊಳ್ಳುವಂತಹ ಮಹಾ ಮಾನವತಾವಾದಿ, ಸಮಾನತೆಯ ಸಂದೇಶ ಸಾರಿದ ಅಂಬೇಡ್ಕರ್‌ ಅವರ ಜಯಂತಿ ಆಚರಣೆಗೆ ತಾಲೂಕು ಆಡಳಿತ ನೀತಿ ಸಂಹಿತಿ ಅಡ್ಡತರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಡೆ ನೀಡುವುದು ಎಷ್ಟು ಸರಿ: ರಾಜಕೀಯ ಪಕ್ಷಗಳ ಅದ್ಧೂರಿ ಕಾರ್ಯ ಕ್ರಮಗಳಿಗೆ ಸಾವಿರಾರು ಮಂದಿ ಸೇರುವ ಕಾರ್ಯ ಕ್ರಮಗಳಿಗೆ ಅನುಮತಿ ನೀಡುತ್ತೀರಿ. ಆದರೆ ರಾಷ್ಟ್ರನಾಯಕ ಅಂಬೇಡ್ಕರ್‌ ಜಯಂತಿ ಅಚರಣೆ ಸರಳವಾಗಿ ಆಚರಣೆ ಮಾಡಬೇಕು, ನಿಗದಿತ ವೇಳೆಗೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕು ಅನ್ನುವ ನಿರ್ಬಂಧ ಏರುವುದು ಬೇಸರ ಮೂಡಿಸಿದೆ. ಅಂಬೇಡ್ಕರ್‌ ಹೆಸರಿನ ಭವನದಲ್ಲಿ ಜಯಂತಿ ಅಚರಣೆಗೆ ನಿರಾಕರಿಸಿ ಭವನದ ಬೀಗದ ಕೀಲಿ ನೀಡುವಲ್ಲಿ ತಾಲೂಕು ಆಡಳಿತ ತಡೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಧಿಕಾರಿಗಳು ಸಹಕರಿಸಬೇಕು: ಭಾರತ ದೇಶದ ಸರ್ವರ ಸಮಾನತೆಯ ಸವಿನೆನಪು ಡಾ.ಬಿ. ಆರ್‌. ಅಂಬೇಡ್ಕರ್‌, ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಎಸ್ಸಿ-ಎಸ್ಟಿ ಸಮುದಾಯ ಬಹುಸಂಖ್ಯೆಯಲ್ಲಿದ್ದಾರೆ. ಅಂಬೇಡ್ಕರ್‌ ಜಯಂತಿ ಅಚರಣೆಗೆ ಚುನಾವಣೆ ನೀತಿ ಸಂಹಿತಿ ಹೆಸರಿನಲ್ಲಿ ಅಡ್ಡಿ ಪಡಿಸಬಾರದು, ಸಮಯ ನಿಗದಿ ಪಡಿಸಬಾರದು ಎಂದು ತಾಲೂಕು ತಹಶೀಲ್ದಾರ್‌ ಸೇರಿದಂತೆ ಅಧಿಕಾರಿಗಳು ಸಹಕರಿಸುವಂತೆ ಮನವಿ ಮಾಡಿಕೊಂಡರು.

ಉಸಿರಿರುವ ತನಕ ಸ್ಮರಿಸಬೇಕು: ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೃಷ್ಣಯ್ಯ ಮಾತನಾಡಿ, ಸಮಾಜದ ಎಲ್ಲಾವರ್ಗದ ಮೈತ್ರಿ ಜೀವನಕ್ಕೆ ಸಂವಿಧಾನ ಮತ್ತು ಅದರ ನೇತಾರ ಡಾ.ಬಿ.ಆರ್‌.ಅಂಬೇಡ್ಕರ್‌ ಕಾರಣ. ಏ.14ರಂದು ಪ್ರತಿವರ್ಷ ಜಗತ್ತಿನಾದ್ಯಂತ ಅಂಬೇಡ್ಕರ್‌ ಸ್ಮರಣೆ ದಿನವಾಗಿದೆ. ಆದರೆ ದೇಶಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ಅಂಬೇಡ್ಕರ್‌ ಸ್ಮರಣೆ 1 ದಿನಕಷ್ಟೇ ಸೀಮಿತವಾಗದೆ ಉಸಿರಿರುವ ತನಕ ಸ್ಮರಿಸಬೇಕು ಎಂದರು.

Advertisement

ಮಹಿಳೆಯರ ಸಮಾನತೆಯ ವಿಶೇಕ ಕಾಯ್ದೆ ಜಾರಿಗೆ ಸದನದಲ್ಲಿ ಅಂಗೀಕರ ದೊರೆಯದೇ ಇದ್ದಾಗ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಂಬೇಡ್ಕರ್‌ ಅವರ ದೂರ ದೃಷ್ಟಿಯ ಮಹಿಳ ಕಾಯ್ದೆ ಅಂದೇ ಅಂಗೀಕಾರವಾಗಿದ್ದರೆ ಮಹಿಳೆಯರ ಸಮಾನತೆ ಬಹುವರ್ಷಗಳ ಹಿಂದೇ ಅಂಗೀಕರಾಗುತ್ತಿತ್ತು. ಅವರ ಜೀವನದ ಪುಸ್ತಕಗಳು ಗ್ರಾಮೀಣ ಭಾಗದ ಯುವ ಪೀಳಿಗೆಗೆ ತಲುಪಬೇಕು. ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಮನನ ಮಾಡಿಕೊಳ್ಳಬೇಕು ಎಂದರು.

ತಹಶೀಲ್ದಾರ್‌ ಮಹೇಶ್‌, ಗ್ರೇಡ್‌-2 ತಹ ಶೀಲ್ದಾರ್‌ ಸಣ್ಣರಾಮಪ್ಪ, ತಾಪಂ ಇಒ ಜೆರಾಲ್ಡ್‌ ರಾಜೇಶ್‌, ಪುರಸಭೆ ಸದಸ್ಯರಾದ ಪ್ರೇಮ್‌ ಸಾಗರ್‌, ಮಧುಕುಮಾರ್‌, ಮಲಾರಪುಟ್ಟಯ್ಯ, ಚಾ. ನಂಜು ಂಡಮೂರ್ತಿ, ಎಂ.ಡಿ.ಮಂಚಯ್ಯ, ಶಿಕ್ಷಣ ಇಲಾಖೆ ಮಹದೇವಯ್ಯ, ಜೀವಿಕ ಸಂಘಟನೆ ಉಮೇಶ್‌, ಬಸವರಾಜು, ಅಂಬೇಡ್ಕರ್‌ ಸ್ವಾಭಿಮಾನಿ ಸೇನೆ ಸದಾನಂದ, ಲಾರಿ ಪ್ರಕಾಶ, ಸಣ್ಣಕುಮಾರ್‌, ನಿರ್ಮ ಲಾ, ಭಾಗ್ಯ, ಭಾನುಮತಿ, ಆನಗಟ್ಟಿ ದೇವರಾಜು, ಚೌಡಳ್ಳಿ ಜವರಯ್ಯ, ತಿಮ್ಮಯ್ಯ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next