Advertisement

Davanagere: ಬಿಜೆಪಿ-ಕಾಂಗ್ರೆಸ್‌ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ

05:37 PM Dec 20, 2024 | Team Udayavani |

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯೊಂದಿಗೆ ಹೊಂದಾಣಿಕೆಯಾಗಿಲ್ಲ. ನಮ್ಮ ಪಕ್ಷದ ಸಿದ್ಧಾಂತವೇ ಬೇರೆ. ಕಾಂಗ್ರೆಸ್ ಸಿದ್ಧಾಂತವೇ ಬೇರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

Advertisement

ಶುಕ್ರವಾರ (ಡಿ.20) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣ ಮಾಡುತ್ತಿಲ್ಲ. ಯಾರೂ ಆ ರೀತಿ ಪತ್ರ ಬರೆದಿದ್ದಾರೋ ಅವರನ್ನೇ ಹೊಂದಾಣಿಕೆ ರಾಜಕಾರಣದ ಬಗ್ಗೆ ಕೇಳಬೇಕು ಎಂದರು.

ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದು ಅಷ್ಟೇ ಸತ್ಯ. ವಿಜಯೇಂದ್ರ ಅವರು ಒಂದು ವರ್ಷದಲ್ಲಿ ನಡೆಸಿರುವ ಹೋರಾಟ, ಸಂಘಟನೆಯ ಬಗ್ಗೆ ದೆಹಲಿ ನಾಯಕರಿಗೆ ತಿಳಿಸಲು ದೆಹಲಿಗೆ ತೆರಳಿದ್ದಾಗಿ ತಿಳಿಸಿದರು.

ಸಿ.ಟಿ. ರವಿ ಅವರು ದತ್ತ ಪೀಠದ ಹೋರಾಟದಲ್ಲಿ ಭಾಗಿಯಾಗುವರು. ಆರ್‌ಎಸ್ಸೆಸ್‌ನಲ್ಲಿ ಸಂಸ್ಕಾರ, ಸಂಸ್ಕೃತಿ ಕಲಿತು ಬೆಳೆದವರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಿಕ್ಷಣ ಸಚಿವರಾಗಿದ್ದವರು. ಅಂತವರು ಅಂತಹ ಪದ ಬಳಕೆ ಮಾಡುವವರೇ ಅಲ್ಲ. ಭ್ರಷ್ಟಾಚಾರ ಮುಂತಾದ ವಿಷಯಗಳ ವಿಷಯಾಂತರ ಮಾಡಲು ಈ ರೀತಿ ಮಾಡಲಾಗುತ್ತಿದೆ. ಅವರ ವಿರುದ್ಧದ ಎಲ್ಲ ಮೊಕದ್ದಮೆ ರದ್ಧುಪಡಿಸುವ ಜೊತೆಗೆ ಬೇಷರತ್ತಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next