Advertisement
ಡಿ.21ರಂದು ಅಂಬರನಾಥ್ ಪಶ್ಚಿಮದ ಶಿವಂ ಮಂಗಲ ಕಾರ್ಯಾ ಲಯ ದಲ್ಲಿ ಕರ್ನಾಟಕ ವೈಭವ ಸಂಸ್ಥೆ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯೋತ್ಸವ ಕೇವಲ ನವೆಂಬರ್ 1ಕ್ಕೆ ಮಾತ್ರ ಸೀಮಿತವಾಗಿರದೆ ಕನ್ನಡದ ಉತ್ಸವಗಳು ನಿತ್ಯ ನಿರಂತರವಾಗಿರಬೇಕೆಂದರು.
Related Articles
Advertisement
ವೇದಿಕೆಯಲ್ಲಿ ಇತರ ಗಣ್ಯರಾಗಿ ವಿಕಾಸ್ ಸೋಮೇಶ್ವರ, ಎಚ್.ಆರ್.ಚಲವಾದಿ, ನಿಖೀಲ್ ವಾಳೆಕರ್, ಧನಶ್ರೀ ವಾಳೆಕರ್, ವಿ.ಎಂ. ಖಾದಿ, ಬಸವಂತ ಪೂಜಾರಿ, ಚಿದಾನಂದ ಚಲವಾದಿ, ಎಂ.ಎಸ್. ಜಲದೆ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಆರ್. ಬಿ. ಹೆಬ್ಬಳ್ಳಿ ಸ್ವಾಗತಿಸಿದರೆ, ಸಹಕಾರ್ಯದರ್ಶಿ ಎಚ್.ಆರ್. ಚಲವಾದಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕ ವಿ. ಎಂ. ಖಾದಿ ಸಂಸ್ಥೆ ನಡೆದು ಬಂದ ದಾರಿ, ಯೋಚನೆ ಮತ್ತು ಯೋಜನೆಗಳನ್ನು ವಿವರಿಸಿದರು. ಎಸ್. ನಿಜಲಿಂಗಪ್ಪ ಕನ್ನಡ ಶಾಲೆಯ ಮಕ್ಕಳ ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಕಲೆಯನ್ನು ಪರಿಚಯಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು. ಶಿಕ್ಷಕರಾದ ಅಜಯ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರೆ, ಶಶಿಕಾಂತ್ ಮಡಿವಾಳ ವಂದಿಸಿದರು. ಶಿಕ್ಷಕರಾದ ಕೆ.ವಿ. ಜಲದೆ, ಅನಿತಾ ರಾಜೊಳ್ಳಿ ಎಚ್. ಹೊನ್ನಳ್ಳಿ ಮತ್ತಿತರರು ಸಹಕರಿಸಿದರು.
ಚಿತ್ರ-ವರದಿ: ಗುರುರಾಜ್ ಪೋತನೀಸ್