ನವದೆಹಲಿ: ಜಮ್ಮು ಕಾಶ್ಮೀರದಲ್ಲಿರುವ ಅಮರನಾಥ ಯಾತ್ರೆಯು ಈ ವರ್ಷದ ಜುಲೈ 1 ರಂದು ಪ್ರಾರಂಭವಾಗಲಿದ್ದು, 31 ಆಗಸ್ಟ್ 2023 ರಂದು ಮುಕ್ತಾಯಗೊಳ್ಳುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದರು.
ತೀರ್ಥಯಾತ್ರೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ನೋಂದಣಿ ಏಪ್ರಿಲ್ 17 ರಿಂದ ಪ್ರಾರಂಭವಾಗಲಿದೆ. ಈ ವರ್ಷ 62 ದಿನಗಳ ಕಾಲ ಯಾತ್ರೆ ನಡೆಯಲಿದೆ.
ತೀರ್ಥಯಾತ್ರೆ ಪ್ರಾರಂಭವಾಗುವ ಮೊದಲು ಟೆಲಿಕಾಂ ಸೇವೆಗಳನ್ನು ಕಾರ್ಯಗತಗೊಳಿಸಲಾಗುತ್ತದೆ ಎಂದು ಸಿನ್ಹಾ ತಿಳಿಸಿದ್ದಾರೆ.
ಯಾತ್ರೆಯು ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂದರ್ಬಾಲ್ ಜಿಲ್ಲೆಯ ಬಾಲ್ಟಾಲ್ ಎರಡೂ ಮಾರ್ಗಗಳಿಂದ ಏಕಕಾಲದಲ್ಲಿ ಪ್ರಾರಂಭವಾಗಲಿದೆ .
Related Articles
ಯಾವುದೇ ತೊಂದರೆ ಇಲ್ಲದೆ ಯಾತ್ರೆಯು ನಡೆಯುವುದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪ್ರಮುಖ ಆದ್ಯತೆಯಾಗಿದೆ. ಆಡಳಿತವು ಎಲ್ಲಾ ಭೇಟಿ ನೀಡುವ ಭಕ್ತರಿಗೆ ಉತ್ತಮ ಗುಣಮಟ್ಟದ ಆರೋಗ್ಯಸೇವೆ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ಸಿನ್ಹಾ ಹೇಳಿದ್ದಾರೆ.