Advertisement

ಫೆ. 23: ಡಯಾನದಲ್ಲಿ ‘ಅಮರಾವತಿ’ಚಿತ್ರ ಪ್ರದರ್ಶನ 

01:23 AM Feb 22, 2017 | Team Udayavani |

ಉಡುಪಿ: ‘ಓದುಗರು ಬಳಗ’ ವಾಟ್ಸ್‌ಆ್ಯಪ್‌ ಗ್ರೂಪ್‌ನ ಸದಸ್ಯರ ಆಯೋಜನೆಯಲ್ಲಿ ಫೆ. 23ರಂದು ಡಯಾನ ಚಿತ್ರ ಮಂದಿರದಲ್ಲಿ ಬಿ. ಎಂ. ಗಿರಿರಾಜ್‌ ನಿರ್ದೇಶನದ ಚಿತ್ರ ‘ಅಮರಾವತಿ’ ಪ್ರದರ್ಶನಗೊಳ್ಳಲಿದೆ. ಸಮಾಜದ ಸಮಸ್ಯೆಗಳನ್ನ ಎಳೆ ಎಳೆಯಾಗಿ ತೋರಿಸಿ ಅದರಲ್ಲೂ ಪ್ರಮುಖವಾಗಿ ಪೌರ ಕಾರ್ಮಿಕರ ಬದುಕು- ಬವಣೆಯ ಸುತ್ತ ಸುತ್ತುವ ಕಥಾ ಹಂದರ ಇರುವ ಚಿತ್ರ ಇದಾಗಿದೆ. ಫೆ. 23ರಂದು ಉಡುಪಿಯ ಡಯಾನ ಚಿತ್ರಮಂದಿರದಲ್ಲಿ ಸಂಜೆ 4. 30 ಹಾಗೂ 7.30 ಗಂಟೆಗೆ ಒಟ್ಟು ಎರಡು ಷೋಗಳು ಪ್ರದರ್ಶನಗೊಳ್ಳಲಿವೆ. ಟಿಕೇಟ್‌ ದರ 60 ರೂ. ಹಾಗೂ 50 ರೂ. ಆಗಿರುತ್ತದೆ. 

Advertisement

ವಿಶೇಷ ಆಹ್ವಾನಿತರು – ಸಂವಾದ
ಚಿತ್ರ ಪ್ರದರ್ಶನಕ್ಕೆ ಉಡುಪಿ ನಗರಸಭೆಯ ಪೌರ ಕಾರ್ಮಿಕರಿಗೆ ಉಚಿತ ಹಾಗೂ ವಿಶೇಷ ಆಹ್ವಾನ ನೀಡಲಾಗಿದೆ. ಚಿತ್ರ ವೀಕ್ಷಣೆ ಮಾತ್ರವಲ್ಲದೆ ಅವರು ತಮ್ಮ ಜೀವನ ಕಥೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲಿದ್ದಾರೆ. ಚಿತ್ರ ಪ್ರದರ್ಶನದ ಬಳಿಕ ಚಿತ್ರದ ನಿರ್ದೇಶಕರು ಹಾಗೂ ತಂಡದ ಜತೆ ಸಂವಾದ ಕಾರ್ಯಕ್ರಮ ನಿಗದಿಪಡಿಸಲಾಗಿದೆ. 

ಸದಭಿರುಚಿಯ ಸಿನಿಮಾ ಬಂದರೆ ಜನ ಖಂಡಿತವಾಗಿಯೂ ನೋಡುತ್ತಾರೆ. ಈ ಚಿತ್ರವನ್ನು ವೀಕ್ಷಿಸುವ ಮೂಲಕ ಪೌರ ಕಾರ್ಮಿಕರ ಸಮಸ್ಯೆ ಏನೆಂಬುದನ್ನು ಅರಿಯಬೇಕು. ಉಡುಪಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ  ಚಿತ್ರ ವೀಕ್ಷಿಸುವಂತೆ ಓದುಗರು ಬಳಗದ ಅಡ್ಮಿನ್‌ಗಳಲ್ಲಿ ಒಬ್ಬರಾಗಿರುವ ಮಂಜುನಾಥ್‌ ಕಾಮತ್‌ ಮನವಿ ಮಾಡಿಕೊಂಡಿದ್ದಾರೆ.

ತುಂಬಾನೇ ಖುಷಿ ಆಗುತ್ತಿದೆ
ವಾಟ್ಸ್‌ಆ್ಯಪ್‌ ಗ್ರೂಪಿನಿಂದ ಇಂತಹ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ. ಉಡುಪಿಯ ಪ್ರಜ್ಞಾವಂತರೇ ಈ ಪ್ರದರ್ಶನ ಏರ್ಪಡಿಸುತ್ತಿರುವುದು ಒಂದು ಉತ್ತಮ ಚಿತ್ರಕ್ಕೆ ಸಂದ ಗೆಲುವು. ದುಡ್ಡಿಗಾಗಿ ಈ ಚಿತ್ರ ಮಾಡಲಿಲ್ಲ. ಆದಷ್ಟು  ಹೆಚ್ಚಿನ ಜನರಿಗೆ ಚಿತ್ರ ತಲುಪಬೇಕು ಎನ್ನುವುದು ನನ್ನ ಉದ್ದೇಶ. ಬಳಗದ ಎಲ್ಲ ಸದಸ್ಯರಿಗೂ ಧನ್ಯವಾದಗಳು.
– ಬಿ. ಎಂ. ಗಿರಿರಾಜ್‌, ಅಮರಾವತಿ ಚಿತ್ರದ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next