Advertisement

ಅಮರ್‌ ಕಹಾನಿ

12:03 PM May 29, 2018 | |

* ಇದೊಂದು ನೈಜ ಘಟನೆಯನ್ನಾಧರಿಸಿದ ಚಿತ್ರ. 90ರ ದಶಕದಲ್ಲಿ ಹೀರೋಯಿನ್‌ ಒಬ್ಬರ ಜೀವನದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ.

Advertisement

* ಇಲ್ಲಿ ನಾಯಕ-ನಾಯಕಿ ಇಬ್ಬರೂ ಬೈಕ್‌ ರೇಸರ್‌ಗಳಾಗಿದ್ದು, ಚಿತ್ರದಲ್ಲಿ ಬೈಕ್‌ ರೇಸ್‌ ಸಹ ಇರಲಿದೆ.

* ಚಿತ್ರಕ್ಕೆ ಸುಮಾರು 80 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಮಂಗಳೂರಿನಿಂದ ಮಡಿಕೇರಿವರೆಗೆ, ಸಕಲೇಶಪುರದಿಂದ ಧರ್ಮಸ್ಥಳದವರೆಗೆ, ಮೈಸೂರಿನಿಂದ ಕೊಯಂಬತ್ತೂರಿನವರೆಗೆ ಚಿತ್ರೀಕರಣ ನಡೆಯಲಿದೆ.

* ಇದಲ್ಲದೆ ಇಂಗ್ಲೆಂಡ್‌, ಸ್ಕಾಟ್ಲಂಡ್‌ ಮತ್ತು ಐರೆಲಂಡ್‌ಗಳಲ್ಲಿ ಚಿತ್ರೀಕರಣ ನಡೆಯಲಿದೆ.

* ಚಿತ್ರಕ್ಕೆ ಇಮ್ರಾನ್‌ ಸರ್ದಾರಿಯಾ ನೃತ್ಯ ಸಂಯೋಜಿಸುತ್ತಿದ್ದು, ಮಿಕ್ಕಂತೆ ಒಂದೊಂದು ಹಾಡಿಗೆ ಪ್ರಭುದೇವ ಮತ್ತು ಲಾರೆನ್ಸ್‌ ಮಾಸ್ಟರ್‌ ನೃತ್ಯ ಸಂಯೋಜಿಸುವ ಸಾಧ್ಯತೆ ಇದೆ.

Advertisement

* ಒಂದು ಹಾಡಿನಲ್ಲಿ ಭಾರತೀಯ ಚಿತ್ರರಂಗದ ಜನಪ್ರಿಯ ಕಲಾವಿದರ ಜೊತೆಗೆ ಕನ್ನಡ ಚಿತ್ರರಂಗದ ಟಾಪ್‌ ಸ್ಟಾರ್‌ಗಳೂ ಸಹ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

* ಚಿತ್ರದಲ್ಲಿ ಐದು ಫೈಟ್‌ಗಳಿದ್ದು, ಅಭಿಷೇಕ್‌ ಇದುವರೆಗೂ ಕಲಿತ ಮಾರ್ಷಲ್‌ ಆರ್ಟ್ಸ್ಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲು ಚಿತ್ರತಂಡ ಮುಂದಾಗಿದೆ. ಸ್ಕಾಟ್‌ಲ್ಯಾಂಡ್‌ನ‌ಲ್ಲಿ ಒಂದು ಅದ್ಭುತ ಫೈಟ್‌ ಸನ್ನಿವೇಶವನ್ನು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.

* ಚಿತ್ರದಲ್ಲಿ ವಿಲನ್‌ ಅಂತ ವಿಶೇಷ ಪಾತ್ರವೇನಿಲ್ಲ. ಇಲ್ಲಿ ಸಮಯವೇ ವಿಲನ್‌.

* ಸಂದೇಶ್‌ ಪ್ರೊಡಕ್ಷನ್ಸ್‌ನ ಮೊದಲ ಚಿತ್ರದಲ್ಲಿ ಅಂಬರೀಶ್‌ ನಟಿಸಿದ್ದರು. ಈಗ ಅಂಬರೀಶ್‌ ಮಗ ಅಭಿಷೇಕ್‌ ಮೊದಲ ಚಿತ್ರವನ್ನು ಸಂದೇಶ್‌ ಪ್ರೊಡಕ್ಷನ್ಸ್‌ ನಿರ್ಮಿಸುತ್ತಿದೆ.

* ನಿನ್ನ ಆಗಿರುವುದು ಮುಹೂರ್ತವಷ್ಟೇ. ಜೂನ್‌ ಕೊನೆಯ ವಾರದಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಬಹುಶಃ ಜೂನ್‌ 24ರಂದು ದೊಡ್ಡ ಕಾರ್ಯಕ್ರಮ ಮಾಡಿ, ಅಭಿಷೇಕ್‌ ಅವರನ್ನು ಲಾಂಚ್‌ ಮಾಡಲಾಗುತ್ತದೆ. ಅಂದು ಬರೀ ಕನ್ನಡ ಚಿತ್ರರಂಗದ ಸ್ಟಾರ್‌ ನಟರಷ್ಟೇ ಅಲ್ಲ, ಎಲ್ಲಾ ಭಾಷೆಯ ಚಿತ್ರರಂಗಗಳ ಸ್ಟಾರ್‌ ನಟರು ಭಾಗವಹಿಸುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next