Advertisement
ಬುಧವಾರ ನಿಯಮ 69ರಡಿ ವಿಷಯ ಪ್ರಸ್ತಾಪಿಸಿದ ಅಶೋಕ್, ಇದು ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಘಟನೆ. ಬಳ್ಳಾರಿಯಲ್ಲಿ ನಡೆದ ಘಟನೆಯ ಅನಂತರ ಸರಕಾರ ಎಚ್ಚೆತ್ತುಕೊಂಡಿದೆ. ಆರೋಗ್ಯ ಇಲಾಖೆಯೇ ರೋಗಪೀಡಿತವಾಗಿದೆ. ಡ್ರಗ್ ಮಾಫಿಯಾದ ಸುಳಿಯಲ್ಲಿ ಸಿಲುಕಿದೆ ಎಂದು ಆರೋಪಿಸಿದರು.
Related Articles
ಆರೋಗ್ಯ ಇಲಾಖೆಯಲ್ಲಿ ನಿಯಮ ಹಾಗೂ ಮನಸ್ಸು ಎರಡೂ ಅನ್ವಯಿಸದೆ ಕೆಲಸ ಮಾಡಲಾಗುತ್ತಿದೆ. 2023-24ರ ಬಜೆಟ್ನಲ್ಲಿ ಆರೋಗ್ಯ ಇಲಾಖೆಗೆ ಇಟ್ಟಿದ್ದ 12 ಸಾವಿರ ಕೋಟಿ ರೂ.ಗಳಲ್ಲಿ ಶೇ. 60ರಷ್ಟು ಖರ್ಚು ಮಾಡಿದ್ದು, ಈ ಬಾರಿ ಈವರೆಗೆ ಕೇವಲ ಶೇ. 23ರಷ್ಟು ಖರ್ಚು ಮಾಡಲಾಗಿದೆ. ರಾಷ್ಟ್ರೀಯ ಆರೋಗ್ಯ ಯೋಜನೆಯ ಶೇ. 40, 15ನೇ ಹಣಕಾಸು ಆಯೋಗದ ಶೇ. 50ರಷ್ಟು ಹಣ ಮಾತ್ರ ಬಳಸಲಾಗಿದೆ. 108 ಆ್ಯಂಬುಲೆನ್ಸ್ ಸೇವೆಯಲ್ಲಿ ಜಿಪಿಎಸ್ ಇಲ್ಲ, ಸಿಬಂದಿಗೆ ಸಂಬಳ ಆಗಿಲ್ಲ. ಆ್ಯಂಬುಲೆನ್ಸ್ ಶವಾಗಾರದಂತಾಗಿವೆ. ಈ ಹಿಂದೆ ಭ್ರೂಣ ಹತ್ಯೆ ಪ್ರಕರಣಗಳು ನಡೆದಾಗಲೇ ಸರಕಾರವನ್ನು ಎಚ್ಚರಿಸಿದ್ದೆವು. ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಿಗೆ ಈಗಲೂ ರಾಷ್ಟ್ರೀಯ ಮಾನ್ಯತೆ ಇಲ್ಲ. ಐಸಿಯು, ಟ್ರಾಮಾ ಕೇಂದ್ರಗಳು ಕೆಲಸ ಮಾಡುತ್ತಿಲ್ಲ. ಔಷಧ ನಿಗಮದಲ್ಲಿ ಲಭ್ಯ ಇರಬೇಕಿದ್ದ 761 ಅಗತ್ಯ ಔಷಧಿಗಳ ಪೈಕಿ 253 ಔಷಧಿಗಳು ಮಾತ್ರ ಇವೆ. ಸರಕಾರ ಮೈಮರೆತಿರುವುದರಿಂದ ಬಾಣಂತಿಯರ ಸಾವು ಸಂಭವಿಸಿದೆ. ಇಷ್ಟಾದರೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಸಣ್ಣ ವಿಷಾದ, ಬೇಸರವೂ ಇಲ್ಲ. ಇದು ಕೊಲೆಗಡುಕ ಸರಕಾರ. ಈ ಕೂಡಲೇ ಮಂತ್ರಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ಸಂಪುಟದಿಂದ ವಜಾಗೊಳಿಸಬೇಕು ಎಂದು ಡಾ| ಸಿ.ಎನ್. ಅಶ್ವತ್ಥನಾರಾಯಣ ಆಗ್ರಹಿಸಿದರು.
Advertisement
ಸರಕಾರಿ ಆಸ್ಪತ್ರೆಗಳಲ್ಲಿ ಕ್ಯಾಶ್ ಕೌಂಟರ್ ಬೇಡಬೆಳಗಾವಿ: ಸರಕಾರಿ ಆಸ್ಪತ್ರೆಗಳಲ್ಲಿ ಕ್ಯಾಶ್ ಕೌಂಟರ್ಗಳು ಇರಬಾರದು. ತತ್ಕ್ಷಣ ತೆಗೆದು ಹಾಕಿ ಎಂದು ಬಿಜೆಪಿಯ ಡಾ| ಸಿ.ಎನ್. ಅಶ್ವತ್ಥನಾರಾಯಣ ಆಗ್ರಹಿಸಿದರು. ಬಾಣಂತಿಯರ ಸರಣಿ ಸಾವು ಕುರಿತ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಬಳಕೆದಾರರ ಶುಲ್ಕ ಹೆಚ್ಚಳ ಮಾಡಲಾಗಿದೆ. ಆದರೆ, ಈವರೆಗೆ ಈ ವಿಚಾರ ಆರೋಗ್ಯ ಸಚಿವರ ಗಮನಕ್ಕೇ ಇಲ್ಲ ಎಂದರು. ಸರಕಾರಿ ಆಸ್ಪತ್ರೆಗಳಿಗೆ ಬರುವವರೆಲ್ಲರೂ ಬಡವರು. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಜನರು. ಅಂಥವರಿಗೆ ಬಳಕೆದಾರರ ಶುಲ್ಕ ವಿಧಿಸುವುದು ಸರಿಯೇ? ಪ್ರಯೋಗಾಲಯದ ಪರೀಕ್ಷೆ, ಚಿಕಿತ್ಸೆ ಎಲ್ಲಕ್ಕೂ ಶುಲ್ಕ ವಿಧಿಸಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಕ್ಯಾಶ್ ಕೌಂಟರ್ ಇರಲೇಬಾರದು. ತತ್ಕ್ಷಣ ಅವುಗಳನ್ನು ತೆಗೆದು ಹಾಕಿ ಎಂದು ಒತ್ತಾಯಿಸಿದರು.