Advertisement
ವರ್ಷದ 365 ದಿನಗಳ ಕಾಲ ನಿರಂತರವಾಗಿ ಅಮರ್ ಜವಾನ್ ಜ್ಯೋತಿ ಪ್ರಜ್ವಲನಗೊಳಿಸಲು ಪ್ರತಿ ತಿಂಗಳಿಗೆ 2 ಸಿಲಿಂಡರ್‌ನಂತೆ ಗ್ಯಾಸ್ ಸಂಪರ್ಕದ ಆವಶ್ಯಕತೆಯಿದ್ದು, ವಾರ್ಷಿಕವಾಗಿ 24 ಸಿಲಿಂಡರ್ ಬೇಕಾದಲ್ಲಿಗೆ ಈಗಾಗಲೇ 35ಕ್ಕೂ ಹೆಚ್ಚು ಮಂದಿ ದಾನಿಗಳು ಹಣವನ್ನು ನೀಡಿದ್ದಾರೆ.
ವರ್ಷಕ್ಕೆ ಒಂದು ಅನಿಲ ಸಿಲಿಂಡರಿನ ಹಣದ ಬಾಬ್ತು 1,000 ರೂ. ಹಾಗೂ ಒಂದು ಸಾವಿರಕ್ಕಿಂತ ಕಡಿಮೆ ಕೊಟ್ಟವರ ಹಣವನ್ನು ಅದರ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ವಾರ್ಷಿಕವಾಗಿ ನವೀಕರಣ, ಬಣ್ಣ ಬಳಿಯುವುದು ಸಹಿತ ನಿರ್ವಹಣೆಯನ್ನು ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು 6 ಮಂದಿಯ ಅಮರ್ ಜವಾನ ಜ್ಯೋತಿ ಸಂರಕ್ಷಣೆ ಸಮಿತಿ ತಿಳಿಸಿದೆ. ಜ್ಯೋತಿ ಪ್ರಜ್ವಲನ ಹಾಗೂ ನಿರ್ವಹಣೆಗಾಗಿ ಹಣದ ನೆರವು ನೀಡಲಿಚ್ಛಿಸುವವರು ಶ್ರೀ ಸುಬ್ರಹ್ಮಣ್ಯ ನಟ್ಟೋಜ, ಸಂಚಾಲಕರು, ಅಮರ್ ಜವಾನ ಜ್ಯೋತಿ ಸಂರಕ್ಷಣೆ ಸಮಿತಿ, ಅಂಬಿಕಾ ಪ.ಪೂ. ವಿದ್ಯಾಲಯ, ನೆಲ್ಲಿಕಟ್ಟೆ, ಪುತ್ತೂರು ಇವರನ್ನು (9448835488) ಸಂಪರ್ಕಿಸಬಹುದು.
Related Articles
ಅಮರ್ ಜವಾನ್ ಜ್ಯೋತಿ ನಿರಂತರ ಬೆಳಗುವ ನಿಟ್ಟಿನಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನು ನೀಡುತ್ತಿದ್ದಾರೆ. ಈ ಸಹಭಾಗಿತ್ವಕ್ಕೆ ಯಾರೂ ಕೈಜೋಡಿಸಬಹುದು. ದೇಶ ರಕ್ಷಣೆಯ ಸಂದರ್ಭದಲ್ಲಿ ಜಿಲ್ಲೆಯ ಯೋಧರು ವೀರ ಮರಣವನ್ನಪ್ಪಿದರೆ ಸರಕಾರಿ ಕಚೇರಿಗಳ ಎದುರು ಅವರಿಗೆ ಗೌರವ ಸಮರ್ಪಿಸುವ ಬದಲು ಪುತ್ತೂರಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಗೌರವ ಸಮರ್ಪಿಸಲು ಅವಕಾಶ ಮಾಡಿಕೊಡುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲು ಸಂರಕ್ಷಣೆ ಸಮಿತಿ ನಿರ್ಧಾರ ಮಾಡಿದೆ.
– ಸುಬ್ರಹ್ಮಣ್ಯ ನಟ್ಟೋಜ, ಸಂಚಾಲಕರು,
ಅಮರ್ ಜವಾನ ಜ್ಯೋತಿ ಸಂರಕ್ಷಣೆ ಸಮಿತಿ
Advertisement