Advertisement

ವನಿತಾ ಪ್ರೀಮಿಯರ್‌ ಲೀಗ್‌: ಅಲಿಸ್ಸಾ ಹೀಲಿ ಯುಪಿ ನಾಯಕಿ

11:02 PM Feb 22, 2023 | Team Udayavani |

ಹೊಸದಿಲ್ಲಿ: ವನಿತಾ ಪ್ರೀಮಿಯರ್‌ ಲೀಗ್‌ನಲ್ಲಿ ಮತ್ತೊಂದು ತಂಡದ ನಾಯಕಿಯ ಆಯ್ಕೆ ನಡೆದಿದೆ. ಯುಪಿ ವಾರಿಯರ್ ತಂಡವನ್ನು ಆಸ್ಟ್ರೇಲಿಯದ ಅನುಭವಿ ಓಪನರ್‌ ಅಲಿಸ್ಸಾ ಹೀಲಿ ಮುನ್ನಡೆಸಲಿದ್ದಾರೆ.

Advertisement

ವಿಕೆಟ್‌ ಕೀಪರ್‌ ಕೂಡ ಆಗಿರುವ ಅಲಿಸ್ಸಾ ಹೀಲಿ ಕಳೆದ ಹರಾಜಿನಲ್ಲಿ 70 ಲಕ್ಷ ರೂ. ಮೊತ್ತಕ್ಕೆ ಮಾರಾಟಗೊಂಡಿದ್ದರು.

ಆಸ್ಟ್ರೇಲಿಯ ಪರ 139 ಟಿ20 ಪಂದ್ಯಗಳನ್ನು ಆಡಿದ್ದು, 2,446 ರನ್‌ ಪೇರಿಸಿದ್ದಾರೆ. ಒಂದು ಶತಕ ಹಾಗೂ 14 ಅರ್ಧ ಶತಕಗಳನ್ನು ಇದು ಒಳಗೊಂಡಿದೆ. 52 ಕ್ಯಾಚ್‌, 58 ಸ್ಟಂಪಿಂಗ್‌ ಕೀಪಿಂಗ್‌ ಸಾಧನೆಯಾಗಿದೆ.

“ಯುಪಿ ವಾರಿಯರ್ ತಂಡದ ನೇತೃತ್ವ ಲಭಿಸಿರುವುದು ಹೆಮ್ಮೆಯ ಸಂಗತಿ. ಈ ಪಂದ್ಯಾವಳಿಯನ್ನು ನಾವು ಕಾತರದಿಂದ ಕಾಯುತ್ತಿದ್ದೇವೆ. ನಮ್ಮದು ಅನಭವಿಗಳ ಹಾಗೂ ಯುವ ಆಟಗಾರ್ತಿಯರ ಸಮತೋಲಿತ ತಂಡವಾಗಿದೆ. ನಿರ್ಭೀತಿಯ ಆಟ ನಮ್ಮ ಶೈಲಿಯಾಗಿದ್ದು, ಗೆಲುವೇ ಗುರಿ ಆಗಿದೆ’ ಎಂದು ಅಲಿಸ್ಸಾ ಹೀಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next